Home Important ಶ್ರೀಗಳ ಚಾತುರ್ಮಾಸ್ಯ ಸಂಪನ್ನ: ಕಡತೋಕಾ ಶಂಭು ಭಟ್ಟರಿಗೆ ಸಂದ ಚಾತುರ್ಮಾಸ್ಯ ಪುರಸ್ಕಾರ

ಶ್ರೀಗಳ ಚಾತುರ್ಮಾಸ್ಯ ಸಂಪನ್ನ: ಕಡತೋಕಾ ಶಂಭು ಭಟ್ಟರಿಗೆ ಸಂದ ಚಾತುರ್ಮಾಸ್ಯ ಪುರಸ್ಕಾರ

SHARE

ಬೆಂಗಳೂರು:ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ 24ನೇ ಚಾತುರ್ಮಾಸ್ಯವು  ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಸಂಪನ್ನಗೊಂಡಿತು. ಗೋಸಂರಕ್ಷಣೆಯ ಸಪ್ತ ಸೂತ್ರಗಳನ್ನು ಜನಮಾನಸಕ್ಕೆ ತಲುಪಿಸುವ ಸಲುವಾಗಿ “ಅಭಯಚಾತುರ್ಮಾಸ್ಯ”ವಾಗಿ ಆಚರಿಸಲ್ಪಡುತ್ತಿದ್ದ ಈ ಚಾತುರ್ಮಾಸ್ಯ ಸೀಮೋಲ್ಲಂಘನದ ಮೂಲಕ  ಚಾತುರ್ಮಾಸ್ಯದ ವ್ರತ ಸಮಾಪ್ತವಾಗಿದೆ.

ಸೆಪ್ಟೆಂಬರ್ 6ಕ್ಕೆ ಬೆಳಗ್ಗೆ 10 ಗಂಟೆಗೆ ಶ್ರೀಕರಾರ್ಚಿತ ಶ್ರೀರಾಮದೇವರ ಪೂಜೆ , 12 ಗಂಟೆಗೆ ಭಿಕ್ಷಾಂಗ ಮಂಗಳಾರತಿ, ಫಲಸಮರ್ಪಣೆ , ಆನಂತರ ಕಗ್ಗಲೀಪುರದಲ್ಲಿರುವ ಶ್ರೀ ಅಮೃತಧಾರಾ ಗೋಶಾಲೆಗೆ ಭೇಟಿ ನೀಡುವ ಮೂಲಕ ಪೂಜ್ಯ ಶ್ರೀಗಳು ವಿಧ್ಯುಕ್ತವಾಗಿ ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಕೈಗೊಂಡರು.

ಮಧ್ಯಾಹ್ನ 3 ಗಂಟೆಗೆ ಶ್ರೀರಾಮಚಂದ್ರಾಪುರಮಠದ ಬೆಂಗಳೂರಿನ ಗಿರಿನಗರದಲ್ಲಿರುವ ಶಾಖಾ ಮಠದಲ್ಲಿ ಪೂಜ್ಯ ಶ್ರೀಗಳ ದಿವ್ಯೋಪಸ್ಥಿತಿಯಲ್ಲಿ ಸೀಮೋಲ್ಲಂಘನದ ಧರ್ಮಸಭೆ ನಡೆಯಿತು. ಹಿರಿಯ ವಿದ್ವಾಂಸರಾದ  ಪ್ರೋ. ಎಸ್ ಶಂಭು ಭಟ್ ಕಡತೋಕ ಇವರಿಗೆ ಈ ವರ್ಷದ “ಚಾತುರ್ಮಾಸ್ಯ ಪ್ರಶಸ್ತಿ”ಯನ್ನು ಅನುಗ್ರಹಿಸಿದ ಶ್ರೀಗಳು. ಸಮಸ್ತ ಭಕ್ತ ಜನಸಮೂಹಕ್ಕೆ ಶ್ರೇಯಸ್ಸಾಗಲೆಂದು ಆಶೀರ್ವದಿಸಿದರು.