Home Article ಶ್ರೀಧರರು ಹೇಳುವ ಪ್ರಕಾರ ಮಹಾತ್ಮರ ನಡೆ ಇಂತಿರುವುದು.

ಶ್ರೀಧರರು ಹೇಳುವ ಪ್ರಕಾರ ಮಹಾತ್ಮರ ನಡೆ ಇಂತಿರುವುದು.

SHARE

ಅಕ್ಷರರೂಪ: ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ.ಪುಣೆ

ಮಹಾತ್ಮರ ನಡತೆಯೆಂದರೆ ಶ್ರುತಿ-ಸ್ಮೃತಿ-ಪುರಾಣಗಳಿಂದ ರಚಿಸಿದ ವಿಶ್ವಮಾನ್ಯ ವ್ಯಕ್ತಿಗಳ ಸುಂದರ ಜೀವನಚರಿತ್ರವಿರುತ್ತದೆ. ಅದು ಈ ಭವಸಾಗರದಿಂದ ಇತರರಿಗೆ ದೋಣಿಯಂತೆ ಉಪಯೋಗಕಾರಕವಿರುತ್ತದೆ.
(ಇಸವಿ ಸನ ೧೯೪೯ರಲ್ಲಿ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಪತ್ರ)
||ಶ್ರೀರಾಮ ಸಮರ್ಥ||
ಮೈಸೂರು
ಜ್ಯೇಷ್ಟ ವ|೭ – ೧೮೬೧
೩-೭- ೧೯೪೯
ಚಿ. ದಿನಕರನಿಗೆ ಆಶೀರ್ವಾದ,
ಚರಿತ್ರಲೇಖನ ವಿಷಯದಲ್ಲಿ ಚಿ. ದತಾ್ತ ಸುಮ್ಮನೇ ಯಾಕೆ ತಲೆಗೆ ಕಿರುಕಳ ಕೊಡುತ್ತಿದ್ದಾನೆ? ಕಾಲಕ್ಕೇ ತಿರುವ ನೀಡುವ ಮಹಾನ ವಿಭೂತಿಗಳ ಲೋಕೋತ್ತರ ಪರೋಪಕಾರದ ಅಸಾಮಾನ್ಯ ಮಹಾತ್ಕಾರ್ಯಗಳು ವಿಶ್ವಕ್ಕೇ ಹೇಗೆ ಹಿತಕಾರಿಯಾಗಿದೆ ಎಂದು ತೋರಿಸಲಿಕ್ಕೆ ಮತ್ತು ಇತರರು ಅವರ ಅಮೋಲ ಸದ್ಗುಣಗಳ ಉತ್ಕೃಷ್ಟ ಅನುಕರಣ ಮಾಡಲೆಂದು ಅಂಥ ಮಹಾನ್ ಪುರುಷರ ಚರಿತ್ರ ಬರೆಯುವದಿರುತ್ತದೆ. ಲೋಕಹಿತದ ಬಗ್ಗೆ ಅಂತಃಕರಣದ ಕಳಕಳಿಯಿಂದ ಪರಿಶ್ರಮಪಡುವ ಆ ಮಹಾತ್ಮರ ದೀರ್ಘ ಪ್ರಯತ್ನಗಳ ಅನವರತ ಪವಿತ್ರ ಜೀವನ ಬೇರೆಯವರಿಗೂ ಆದರ್ಶವಿರುತ್ತದೆ. ಅವರ ನಡತೆಯೆಂದರೆ ಶ್ರುತಿ-ಸ್ಮೃತಿ-ಪುರಾಣಗಳಿಂದ ರಚಿಸಿದ ವಿಶ್ವಮಾನ್ಯ ವ್ಯಕ್ತಿಗಳ ಸುಂದರ ಜೀವನಚರಿತ್ರವಿರುತ್ತದೆ. ಅದು ಈ ಭವಸಾಗರದಿಂದ ಇತರರಿಗೆ ದೋಣಿಯಂತೆ ಉಪಯೋಗಕಾರಕವಿರುತ್ತದೆ. ‘ಮಹಾಜನೋ ಯೇನ ಗತಃ ಸ ಪಂಥಾಃ’ ಈ ವಾಕ್ಯದಂತೆ ಅಂತವರ ಜೀವನ ಚರಿತ್ರವೆಂದರೆ ಅದೊಂದು ಧರ್ಮರಹಸ್ಯದ ಗೂಢ ಪ್ರಶ್ನೆ ಬಿಡಿಸಿ ತೋರಿಸುವ ಸರ್ವೋಪಯೋಗಿ ಧರ್ಮಗ್ರಂಥವೇ ಆಗಿರುತ್ತದೆ. ಅಂಥ ಮಹಾನ್ ವ್ಯಕ್ತಿಗಳ ನಡತೆಯೆಂದರೆ ಪ್ರತಿ ಹೆಜ್ಜೆಯಲ್ಲಿ ಪರಮಾತ್ಮಪದದೆಡೆಗೆ ಹೋಗುವ ಒಂದು ಸುಲಭ ಮತ್ತು ಪವಿತ್ರವಾದ ಕಾಲುದಾರಿಯೇ ಆಗಿರುತ್ತದೆ. ಆದ್ದರಿಂದಲೇ ಅವರ ಹತ್ತಿರವಿರುವ ಜನ ಅವರ ಪ್ರತಿಯೊಂದು ಪ್ರಸಂಗದ ಟಿಪ್ಪಣಿ ಮಾಡಿ ಇಡುತ್ತಾರೆ ಮತ್ತು ಚರಿತ್ರರೂಪದಿಂದ ಪ್ರಸಿದ್ಧ ಮಾಡುತ್ತಾರೆ. ತರ್ಕಬಾಹಿರ ಭವಿಷ್ಯಕಾಲದ ಗೂಢ, ಯೋಗಾಯೋಗ ಹೇಗೆ ಇರುತ್ತದೆ ಅದನ್ನು ಯಾರಿಗೂ ಹೇಳಲಿಕ್ಕೆ ಬರುವದಿಲ್ಲ. ಪರಮೇಶ್ವರ ಪ್ರಸಾದದಿಂದ ಕ್ಷಣಮಾತ್ರದಲ್ಲಿ ದರಿದ್ರಿಯು ಧನಾಢ್ಯನಾಗುತ್ತಾನೆ. ಪರಮೇಶ್ವರನ ಸಾಮರ್ಥ್ಯ ಅನಂತ ಮತ್ತು ಅತರ್ಕ್ಯವಾಗಿದೆ.
ಈವರೆಗಾದರೂ, ನನ್ನ ಚರಿತ್ರೆ ಬರೆಯಬೇಕೆಂಬಂತ ‘ಉತ್ಕಟ ಭವ್ಯ ಭಾರೀ’ ಏನೂ ನನ್ನ ಜೀವನದಲ್ಲಿ ನನಗೆ ಕಂಡು ಬಂದಿಲ್ಲ ….
ಮೈಸೂರಿನಿಂದ ೨೫ ಕಿ.ಮಿ.ನಲ್ಲಿ ಏಕಾಂತ ನಿರ್ಜನ ಸ್ಥಳದಲ್ಲಿ ಚಾತುರ್ಮಾಸ ನಿಶ್ಚಯಿಸಲಾಗಿದೆ. ಮುಂದೆ ಪತ್ರ ಬರೆಯಲು ಆಗುವದಿಲ್ಲ ಮತ್ತು ಯಾರಿಗೂ ದರ್ಶನವೂ ಇಲ್ಲ. ಅಷ್ಟೇಕರ ಮತ್ತು ನೀಲಕಂಠ ಕಾಶೀಕರ ನನ್ನ ಸಂಗಡ ಇದ್ದಾರೆ.
ಮತ್ತೆಲ್ಲಾ ಕ್ಷೇಮ,
||ಸರ್ವೇ ಜನಾಃ ಸುಖಿನೋ ಭವಂತು||
ಇತಿ ಶಮ್
ಶ್ರೀಧರ