Home Local ಕಾರ್ಯಕ್ರಮ ಸಂಘಟನೆ,ಮತ್ತು ನಿರೂಪಣಾ ಕೌಶಲ ಕಾರ್ಯಾಗಾರ

ಕಾರ್ಯಕ್ರಮ ಸಂಘಟನೆ,ಮತ್ತು ನಿರೂಪಣಾ ಕೌಶಲ ಕಾರ್ಯಾಗಾರ

SHARE

ಭಟ್ಕಳ : ತಾಲೂಕಿನ  ಗುರು ಸುಧೀಂದ್ರ ಪದವಿ ಕಾಲೇಜು,ಬಿ.ಸಿ.ಎ.,ಬಿ.ಬಿ.ಎ.ಕಾಲೇಜು ಹಾಗೂ
ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ
ಕಾಲೇಜು ವಿದ್ಯಾರ್ಥಿಗಳಿಗೆ ಒಂದುದಿನದ ಕಾರ್ಯಕ್ರಮ ಸಂಘಟನೆ,ಮತ್ತು ನಿರೂಪಣಾ ಕೌಶಲ ಕಾರ್ಯಾಗಾರವು ಗುರು ಸುಧೀಂದ್ರ ಬಿ.ಸಿ.ಎ,ಬಿ.ಬಿ.ಎ.ಕಾಲೇಜಿನ ಬಿ.ಇ.ಟಿ.ಆಡಿಟೋರಿಯಮ್ ನಲ್ಲಿ ದಿನಾಂಕ ೭.೯.೨೦೧೭ರ ಗುರುವಾರ ರ ಮುಂಜಾನೆ ೯.೩೦ ರಿಂದ ನಡೆಯಲಿದೆ. ವಿವಿದ ಕಾಲೇಜುಗಳಿಂದ ಆಸಕ್ತ ೧೦೦ ವಿದ್ಯಾರ್ಥಿಗಳು, ಮತ್ತು ಉಪನ್ಯಾಸಕ ವೃಂದದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಭಟ್ಕಳ ಕಸಾಪ ಅಧ್ಯಕ್ಷರಾದ ಗಂಗಾಧರ ನಾಯ್ಕ ಸರ್ವರನ್ನೂ ಸ್ವಾಗತಿಸಿದ್ದಾರೆ.