Home Local ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಶ್ರೀ ಪ್ರಭುಲಿಂಗ ಸ್ವಾಮೀಜಿ

ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಶ್ರೀ ಪ್ರಭುಲಿಂಗ ಸ್ವಾಮೀಜಿ

SHARE
ಗೋಕರ್ಣ ; ಪ ಪೂ  ಶ್ರೀ ಶ್ರೀ ಪ್ರಭುಲಿಂಗ  ಸ್ವಾಮೀಜಿ , ಶ್ರೀ ಸಿದ್ಧಾರೂಢ ಮಠ, ಹುಬ್ಬಳ್ಳಿ  ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
ಉಪಾಧಿವಂತ ಮಂಡಳಿ ಸದಸ್ಯ ವೇ ಲಕ್ಷ್ಮೀ ನಾರಾಯಣ ಜಂಭೆ  ಇವರು ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು .