Home Important ಸಂಕಷ್ಟ ಪರಿಹಾರದ ನಿರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು?

ಸಂಕಷ್ಟ ಪರಿಹಾರದ ನಿರೀಕ್ಷೆಯಲ್ಲಿ ಆಶಾ ಕಾರ್ಯಕರ್ತೆಯರು?

SHARE

ಬೆಂಗಳೂರು : ಕನಿಷ್ಟ ಆರು ಸಾವಿರ ಮಾಸಿಕ ವೇತನ ನಿಗದಿ ಮಾಡಬೇಕೆಂಬ ಬೇಡಿಕೆಯನ್ನಿಟ್ಟುಕೊಂಡು ಸಾವಿರಾರು ಆಶಾ ಕಾರ್ಯಕರ್ತೆಯರು ಎಐಟಿಯುಸಿ ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವನ್ನು ಗುರುವಾರದಿಂದ ಪ್ರಾರಂಭಿಸಿದ್ದು, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ಪ್ರಾರಂಭಿಸಿರುವ ಸೂಕ್ತ ಸೌಲಭ್ಯಗಳಿಲ್ಲದೆ ಬೆಂಗಳೂರಿನಲ್ಲಿ ಪರದಾಡುತ್ತಿದ್ದಾರೆ. ಮಳೆಯ ನಡುವೆ ಒದ್ದೆ ನೆಲದಲ್ಲಿ ನಿನ್ನೆ ನಿದ್ದೆ ಮಾಡಿದ ಕಾರ್ಯಕರ್ತೆಯರಿಗೆ ಬೆಳಗ್ಗೆ ನಿತ್ಯ ಕರ್ಮಕ್ಕೂ ಸಂಕಷ್ಟ ಪ್ರಾರಂಭವಾಗಿದೆ.

ನಗರದ ಫ್ರೀಡಂಪಾರ್ಕ್ನಲ್ಲಿ ಗುರುವಾರದಿಂದಲೇ ಆಹೋ ರಾತ್ರಿ ಪ್ರತಿಭಟನೆ ಪ್ರಾರಂಭಿಸಿರುವ ಆಶಾ ಕಾರ್ಯಕರ್ತೆಯರು ಶೌಚಾಲಯ ವ್ಯವಸ್ಥೆ ಇಲ್ಲದೆ ಪರದಾಡುತ್ತಿದ್ದಾರೆ. ಪ್ರತಿಭಟನೆಯ ಪೆಂಡಾಲ್ನಲ್ಲೆ ರಾತ್ರಿ ನಿದ್ದೆಯಿಲ್ಲದೆ ಕಳೆದಿದ್ದಾರೆ, ಮೈ ನಡುಗುವ ಚಳಿಯಲ್ಲಿ ರಾತ್ರಿ ಕಳೆದ ಆಶಾ ಕಾರ್ಯಕರ್ತೆಯರು ಸರ್ಕಾರ ಬೇಡಿಕೆ ಈಡೇರಿಸದ ಹೊರತು ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕೂತಿದ್ದಾರೆ.

ಅದರಲ್ಲೂ ಚಿಕ್ಕ ಮಕ್ಕಳನ್ನು ತಮ್ಮ ಜೊತೆ ಕರೆತಂದಿರುವ ತಾಯಂದಿರ ಸಂಕಷ್ಟವನ್ನು ವಿವರಿಸಲು ಸಾಧ್ಯವಿಲ್ಲ. ಪಾರ್ಕ್ ಕಾರಿಡಾರ್, ಪೆಂಡಾಲ್, ಅಂಗಡಿಗಳ ಮುಂದೆ ಕೂತು ಜಾಗರಣೆ ಮಾಡಿದ್ದಾರೆ.