Home Local ಗಟ್ಟದ ಮೇಲೆ ಭಾರೀ ಮಳೆ ಜನಜೀವನ ಅಸ್ತವ್ಯಸ್ಥ

ಗಟ್ಟದ ಮೇಲೆ ಭಾರೀ ಮಳೆ ಜನಜೀವನ ಅಸ್ತವ್ಯಸ್ಥ

SHARE

ಶಿರಸಿ:  ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ, ಯಲ್ಲಾಪುರ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಕೆಲವೆಡೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಶುಕ್ರವಾರ ಏಕಾಏಕಿ ವರುಣನ ಆರ್ಭಟದಿಂದ ಘಟ್ಟದ ಮೇಲಿನ ಯಲ್ಲಾಪುರ ಹಾಗೂ ಸಿದ್ದಾಪುರ ತಾಲೂಕುಗಳ ಜನರು ಕಂಗಾಲಾಗಿದ್ದಾರೆ. ಎರಡು ಗಂಟೆಗಳ ಕಾಲ ಗುಡುಗು ಸಹಿತ ಸುರಿದ ಮಳೆಯಿಂದ ಜನಜೀವನ ಅಸ್ತವ್ಯವಸ್ತಗೊಂಡಿತ್ತು.
ಪಟ್ಟಣದ ರಸ್ತೆ, ಚರಂಡಿಯಲ್ಲಿ ಹರಿದ ಭಾರೀ ಪ್ರಮಾಣದ ನೀರಿನಿಂದ ವಾಹನ ಸವಾರರು ಪರದಾಡುವಂತಾಯಿತು.
ಕಳೆದ ವಾರದಿಂದ ಬಿರು ಬಿಸಿಲಿಂದ ಕಂಗೆಟ್ಟಿದ್ದ ಜನತೆಗೆ ಏಕಾ ಏಕಿ ಸುರಿದ ಮಳೆಗೆ ಒಂದೆಡೆ ಸಂತಸ ವ್ಯಕ್ತಪಡಿಸಿದ್ದಾರೆ.