Home Local ಕಾರ್ಯಕ್ರಮ ಸಂಘಟನೆ ಮತ್ತು ನಿರೂಪಣಾ ಕೌಶಲದ ಕಾರ್ಯಾಗಾರ

ಕಾರ್ಯಕ್ರಮ ಸಂಘಟನೆ ಮತ್ತು ನಿರೂಪಣಾ ಕೌಶಲದ ಕಾರ್ಯಾಗಾರ

SHARE

ಭಟ್ಕಳ : ಗುರು ಸುಧೀಂದ್ರ ಕಾಲೇಜು ಹಾಗೂ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಾರ್ಯಕ್ರಮ ಸಂಘಟನೆ ಮತ್ತು ನಿರೂಪಣಾ ಕೌಶಲದ ಒಂದು ದಿನದ ಕಾರ್ಯಾಗಾರವು ಜರುಗಿತು. ಭಟ್ಕಳ ಎಜುಕೇಶನ್ ಟ್ರಸ್ಟನ ಶೈಕ್ಷಣಿಕ ಸಲಹೆಗಾರ ಬಿ.ಆರ್.ಕೆ.ಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ವಿಧ್ಯಾರ್ಥಿಗಳು ಪದವಿಯ ಜೊತೆಗೆ ವಿವಿಧ ಕೌಶಲಗಳನ್ನು ಬೆಳೆಸಿಕೊಳ್ಳಬೇಕು ಈ ನೆಲೆಯಲ್ಲಿ ಔಚಿತ್ಯ ಪೂರ್ಣ ಕಾರ್ಯಕ್ರಮವನ್ನು ಸಂಘಟಿಸಿರುವುದು ಸಂತಸದ ಸಂಗತಿ ಎಂದು ನುಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಭಟ್ಕಳ ಎಜುಕೇಶನ್ ಟ್ರಸ್ಟನ ಆಡಳಿತಾಧಿಕಾರಿ ನಾಗೇಶ್ ಭಟ್ ಮಾತನಾಡಿ ಕನ್ನಡ ಸಾಹಿತ್ಯ ಪರಿಷತ್ತು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತ ಕಾರ್ಯಕ್ರಮ ಆಯೋಜಿಸಲು ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸಿ ಸಹಕಾರ ನೀಡಿರುವುದು ಅತ್ಯಂತ ಸಂತಸದ ಸಂಗತಿ ಎಂದರಲ್ಲದೇ ಪರಿಷತ್ತು ಅತ್ಯಂತ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

 

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ತಾವಿಕ ನುಡಿಗಳನ್ನಾಡಿ ಸಮರ್ಥವಾಗಿ ಕಾರ್ಯಕ್ರಮ ಸಂಘಟಿಸಬಲ್ಲ, ನಿರೂಪಿಸಬಲ್ಲ, ವರದಿಮಡಬಲ್ಲ ವ್ಯಕ್ತಿಗಳ ಅಗತ್ಯವಿದೆ. ಆದರೆ ಅಂತಹ ವ್ಯಕ್ತಿಗಳ ಕೊರತೆ ಇರುವುದನ್ನು ಮನಗಂಡೇ ಈ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ನುಡಿದರು. ಕಾಲೇಜಿನ ಉಪಪ್ರಾಂಶುಪಾಲ ಶ್ರೀನಾಥ್ ಪೈ ಎಲ್ಲರನ್ನು ಸ್ವಾಗತಿಸಿದರು. ಗ್ರಂಥಪಾಲಕಿ ವಿದ್ಯಾ ಪೈ ಪ್ರಾರ್ಥಿಸಿದರೆ ಓಂಕಾರ ಮರಬಳ್ಳಿ ವಂದಿಸಿದರು.ಕಾರ್ಯಕ್ರಮನ್ನು ವಿಶ್ವನಾಥ್ ಭಟ್ ನಿರೂಪಿಸಿದರು. ನಂತರ ನಂತರ ಸಂಪನ್ಮೂಲ ವ್ಯಕ್ತಿಗಳಾದ ಕಾರ್ಯಕ್ರಮ ನಿರೂಪಣೆಯ ರೂಪುರೇಶೆಗಳ ಕುರಿತು ಶ್ರೀಧರ ಶೇಟ್, ಕಾರ್ಯಕ್ರಮದ ಸಂಘಟನೆಯ ಕುರಿತು ಶ್ರೀನಾಥ್ ಪೈ, ನಿರೂಪಕನ ಸಮಯ ಪ್ರಜ್ಞೆ ಮತ್ತು ಸವಾಲುಗಳ ಕುರಿತು ಪ್ರಶಾಂತ ಹೆಗಡೆ ಮೂಡಲ ಮನೆ, ಕಾರ್ಯಕ್ರಮದ ವರದಿ ಮಾಡುವಿಕೆ ಮತ್ತು ವಾರ್ತಾ ವಾಚನ ಕೌಶಲದ ಕುರಿತು ವಿದ್ಯಾಧರ ಕಡತೋಕಾ, ಕಾರ್ಯಕ್ರಮದಲ್ಲಿ ಪ್ರಾರ್ಥನೆ, ಸ್ವಾಗತಗೀತೆಗಳು ಹೇಗಿರಬೇಕು ಎಮಬುದರ ಕುರಿತು ಬಿ.ಸಿ.ಎ.ಕಾಲೇಜಿನ ಕಛೇರಿ ವ್ಯವಸ್ಥಾಪಕಿ ಪಲ್ಲವಿ ನಾಯಕ್ ಮಾರ್ಗದರ್ಶನೆ ನೀಡಿದರೆ ನಿರೂಪಕನ ಪಾತ್ರ ಮತ್ತು ಜವಾಬ್ಧಾರಿಗಳ ಕುರಿತು ಗಂಗಾಧರ ನಾಯ್ಕ ಕುರಿತು ಸವಿವರವಾಗಿ ಮಾಹಿತಿ ನೀಡಿದರು.

ನಂತರ ಸಂಜೆ ನಡೆದ ಸಮಾರೋಪ ಸಮಾರಂಭದ ಸಂಘಟನೆ ಮತ್ತು ನಿರೂಪಣೆಯನ್ನು ಶಿಬಿರಾರ್ಥಿಗಳೇ ನಿರ್ವಹಿಸಲು ಮಾರ್ಗದರ್ಶನ ನೀಡಿ ಪ್ರಾಯೋಗಿಕವಾಗಿ ಕಾರ್ಯಕ್ರಮ ಸಂಘಟನೆ ಮತ್ತು ನಿರೂಪಣೆಯ ಅನುಭವ ನೀಡಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಗಂಗಾಧರ ನಾಯ್ಕ ವಹಿಸಿದರೆ ಅತಿಥಿಗಳಾಗಿ ಉಪಪ್ರಾಂಶುಪಾಲ ಶ್ರೀನಾಥ ಪೈ, ಉಪನ್ಯಾಸಕರಾದ ವಿಶ್ವನಾಥ ಭಟ್, ವಿಖ್ಯಾತ್ ಪ್ರಭು, ಓಂಕಾರ ಮರಬಳ್ಳಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭಟ್ಕಳ ಹಾಗೂ ವಿವಿಧ ತಾಲೂಕಿನ ಪದವಿ ಹಾಗೂ ಪಿಯೂಸಿ ಕಾಲೇಜಿನ ಸುಮಾರು ನೂರು ವಿಧ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.