Home Local ಕುಮಟಾ ರೋಟರಿಯಿಂದ ವ್ಹೀಲ್ ಚೇರ್ ಕೊಡುಗೆ

ಕುಮಟಾ ರೋಟರಿಯಿಂದ ವ್ಹೀಲ್ ಚೇರ್ ಕೊಡುಗೆ

SHARE

ಕುಮಟಾ : ಇಲ್ಲಿಯ ರೋಟರಿ ಕ್ಲಬ್ ವತಿಯಿಂದ  ದಿವ್ಯಾಂಗಿ ಕುಮಾರಿ  ದಿವ್ಯಾ ಗಜಾನನ ನಾಯ್ಕ ಇವಳಿಗೆ ಉಪಯುಕ್ತವಾದ ವ್ಹೀಲ್ ಚೇರ್ ನ್ನು ಕೊಡುಗೆಯಾಗಿ ನೀಡಲಾಗಿದೆ. ಅಂಗ ವೈಕಲ್ಯದಿಂದ ಬಳಲುತ್ತಿರುವ ಕುಮಾರಿ  ದಿವ್ಯಾ ಗಜಾನನ ನಾಯ್ಕ ಇವಳಿಗೆ ವೀಲ್ ಚೇರ್ ನೀಡುವ ಮೂಲಕ ಕುಮಟಾ ರೋಟರಿ ಕ್ಲಬ್ ಮಾನವೀಯತೆ ಮೆರೆದಿದೆ.

ಈ ಸಂದರ್ಭದಲ್ಲಿ ರೋಟರಿ ಅಧ್ಯಕ್ಷ ವಸಂತರಾವ್, ಕಾರ್ಯದರ್ಶಿ ಚೇತನ ಶೇಟ್,  ರೊಟೇರಿಯನ್ ಸತೀಶ ನಾಯ್ಕ, ಸುರೇಶ ಭಟ್, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಘದ ಯೋಜನಾಧಿಕಾರಿ ನಾರಾಯಣ ಪಾಲನ್ ಮತ್ತಿತರರು ಉಪಸ್ಥಿತರಿದ್ದರು.