Home Local ಕಾರು-ಲಾರಿ ಮುಖಾಮುಖಿ ಡಿಕ್ಕಿ: ಓರ್ವನ ಸಾವು

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಓರ್ವನ ಸಾವು

SHARE

ಭಟ್ಕಳ: ಕೇರಳದಿಂದ ದೇವಸ್ಥಾನಗಳಿಗೆ ಬಂದಿದ್ದ ಕಾರೊಂದು ಮುರ್ಡೇಶ್ವರ ಬಸ್ತಿಯಲ್ಲಿ ಲಾರಿಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಓರ್ವ ಮೃತ ಪಟ್ಟು ಮೂವರು ಗಾಯಗೊಂಡಿರುವ ಘಟನೆ ಭಟ್ಕಳದ ಮುರ್ಡೇಶ್ವರ ಸಮೀಪ ನಡೆದಿದೆ.

ಕೇರಳದಿಂದ ಎರಡು ಕಾರುಗಳಲ್ಲಿ ದೇವಸ್ಥಾನಗಳಿಗೆ ಬಂದಿದ್ದ ತಂಡ ಕೊಲ್ಲೂರಿನಿಂದ ಮುರ್ಡೇಶ್ವರಕ್ಕೆ ಬಂದಿತ್ತು ಮುರ್ಡೇಶ್ವರದಿಂದ ವಾಪಾಸು ಹೋಗುತ್ತಿರುವ ಸಂದರ್ಭದಲ್ಲಿ ಬಸ್ತಿಯಲ್ಲಿ ಕಾರು ಮತ್ತು ಲಾರಿಯ ನಡುವೆ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿ ಹಿಂಬದಿಯಲ್ಲಿ ಕುಳಿತಿದ್ದ  ಭಾಸ್ಕರನ್ (70) ಎನ್ನುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.  ಕಾರಿನ ಚಾಲಕ ಸರೀಶ್ (34), ಹಾಗೂ ಪ್ರಯಾಣಿಕ ರವೀಂದ್ರನ್ (65) ಹಾಗೂ ಶೆಜು (40) ಗಂಭೀರ ಗಾಯಗೊಂಡಿದ್ದು ಪ್ರಥಮ ಚಿಕಿತ್ಸೆಯನ್ನು ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಬಾಗ ಸಂಪೂರ್ಣ ಜಖಂ ಗೊಂಡಿದೆ. ಸ್ಥಳಕ್ಕೆ ಸಿ.ಪಿ.ಐ. ಸುರೇಶ ನಾಯಕ ಭೇಟಿ ನೀಡಿ ಮಾಹಿತಿ ಪಡೆದರು. ಎರಡೂ ಕಾರಿನಲ್ಲಿದ್ದವರು ಪರಸ್ಪರ ಸಂಬಂಧಿಕರು ಎಂದೂ ತಿಳಿದು ಬಂದಿದೆ. ಮುರ್ಡೇಶ್ವರ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.