Home Local ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ‘ಪ್ರತಿರೋಧ ಸಮಾವೇಶ’

ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಡೆದ ‘ಪ್ರತಿರೋಧ ಸಮಾವೇಶ’

SHARE
Bengaluru: Slain journalist Gauri Lankesh's mother Indira Lankesh and her niece Isha with Civil Rights Activist Teesta Setalvad at a rally against her assassination at central college ground in Bengaluru on Tuesday. PTI Photo by Shailendra Bhojak(PTI9_12_2017_000102B)

ಬೆಂಗಳೂರು: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ವಿರೋಧಿಸಿ ನಗರದಲ್ಲಿ ನಡೆದ ‘ಪ್ರತಿರೋಧ ಸಮಾವೇಶ’ ಯಶಸ್ವಿಯಾಗಿ ನಡೆಯಿತು. ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ಆಗಮಿಸಿದ ಚಿಂತಕರು, ಹೋರಾಟಗಾರರು, ಗಣ್ಯರು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು. ‘ನಾನೂ ಗೌರಿ, ನಾವೆಲ್ಲಾ ಗೌರಿ’ ಎಂಬ ಘೋಷಣೆ ಸಮಾವೇಶ ನಡೆದ ಬೆಂಗಳೂರಿನ ಸೆಂಟ್ರಲ್ ಕಾಲೇಜು ಮೈದಾನದಿಂದ ಮೊಳಗಿತು. ದೇಶದ ವಿಭಿನ್ನ ಚಿಂತಕರು ಮತ್ತು ಹೋರಾಟಗಾರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ಒಂದೆಡೆಯಾದರೆ, ಗೌರಿ ಲಂಕೇಶ್ ಪತ್ರಿಕೆಯ ವಿಶೇಷ ಸಂಚಿಕೆ ಬಿಡುಗಡೆ, ನಿರ್ಣಯಗಳ ಮಂಡನೆಗೆ ಈ ಬೃಹತ್ ಸಮಾವೇಶ ಸಾಕ್ಷಿಯಾಯಿತು.