Home Local ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಜಗದೀಶ್ವರ ಮಹಾಸ್ವಾಮಿಗಳು.

ಆತ್ಮಲಿಂಗ ಪೂಜೆ ನೆರವೇರಿಸಿದ ಶ್ರೀ ಜಗದೀಶ್ವರ ಮಹಾಸ್ವಾಮಿಗಳು.

SHARE
ಪ ಪೂ ಶ್ರೀ ಶ್ರೀ ಜಗದೀಶ್ವರ ಮಹಾಸ್ವಾಮಿಗಳು , ಪೀಠಾಧ್ಯಕ್ಷರು , ಶ್ರೀ ಸಚ್ಚಿದಾನಂದ ಶಿವಯೋಗಿ ಶಾಂತಮಠ , ಅಕ್ಕಲಕೋಟ   ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
ಉಪಾಧಿವಂತ ಮಂಡಳಿ ಸದಸ್ಯ, ಭರದ್ವಾಜ ವೇದಾರಣ್ಯ ವೇದವಿದ್ಯಾ ಪ್ರತಿಷ್ಠಾನ ಟ್ರಸ್ಟ್ (ರಿ) ಗೋಕರ್ಣ  ಇದರ ಅಧ್ಯಕ್ಷರಾದ ವೇ ಮಹಾಬಲೇಶ್ವರ ಶಂಕರಲಿಂಗ ಘನಪಾಟಿಗಳು ಗೋಕರ್ಣ ಇವರು   ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ಲಕ್ಷ್ಮೀನಾರಾಯಣ ಜಂಭೆ ಇವರು  ಪೂಜಾ ಕೈಂಕರ್ಯ ನೆರವೇರಿಸಿದರು