Home Local ನಿನಾದ ಜಿಲ್ಲಾ ಮಟ್ಟದ ಭಾವಗೀತೆ -ಶ್ರೇಯಾ, ಪ್ರತಿಕ್ಷಾ ತನುಜಾಗೆ ಬಹುಮಾನ

ನಿನಾದ ಜಿಲ್ಲಾ ಮಟ್ಟದ ಭಾವಗೀತೆ -ಶ್ರೇಯಾ, ಪ್ರತಿಕ್ಷಾ ತನುಜಾಗೆ ಬಹುಮಾನ

SHARE

ಭಟ್ಕಳ: ನಿನಾದ ಸಾಹಿತ್ಯ ಸಂಗೀತ ಸಂಚಯ ಭಟ್ಕಳ ಇವರು ಮುಂದೆ ಹಮ್ಮಿಕೊಳ್ಳಲಿರುವ ದಸರಾ ಕಾವ್ಯೋತ್ಸವ ಅದ್ದೂರಿ ಕಾರ್ಯಕ್ರಮದ ನಿಮಿತ್ತ ಪೂರ್ವಭಾವಿಯಾಗಿ ದಿನಕರ ದೇಸಾಯಿಯವರ ಹುಟ್ಟಿದ ದಿನದಂದು ಜನತಾ ವಿದ್ಯಾಲಯ ಶಿರಾಲಿಯಲ್ಲಿ ಹಮ್ಮಿಕೊಂಡ ಜಿಲ್ಲಾಮಟ್ಟದ ಭಾವಗೀತ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಮಾರಿ ಶ್ರೇಯಾ ಹೆಬ್ಬಾರ. ದ್ವಿತೀಯ ಕುಮಾರಿ ಪ್ರತೀಕ್ಷಾ ಕಡ್ಲೆ ಮತ್ತು ತೃತೀಯ ಸ್ಥಾನವನ್ನು ಕುಮಾರಿ ತನುಜಾ ಎನ್. ನಾಯ್ಕ ಹೊನ್ನಾವರ ಇವರು ಪಡೆದುಕೊಂಡಿರುತ್ತಾರೆ ಎಂದು ನಿನಾದದ ಪ್ರಧಾನ ಸಂಚಾಲಕ ಉಮೇಶ ಮುಂಡಳ್ಳಿ ತಿಳಿಸಿರುತ್ತಾರೆ.

 
ನಿರ್ಣಾಯಕರಾಗಿ ಝೇಂಕಾರ ಮೆಲೋಡಿಸ್ ನ ಗಾಯಕ ರಾಜಾರಾಮ್ ಪ್ರಭು ಮತ್ತು ಜಿಲ್ಲೆಯ ಸುಗಮ ಸಂಗೀತ ಗಾಯಕ ಉಮೇಶ ಮುಂಡಳ್ಳಿ ಸಹಕರಿಸಿದ್ದರು. ವಿಜೇತರಿಗೆ ಭಟ್ಕಳ ಚಿತ್ರಾಪುರದಲ್ಲಿ ನಡೆಯುವ ನಿನಾದ ದಸರಾ ಕಾವ್ಯೋತ್ಸವದಲ್ಲಿ ಗಣ್ಯರಿಂದ ಬಹುಮಾನ ಪ್ರಶಸ್ತಿ ಪತ್ರನೀಡಿ ಗೌರವಿಸಲಾಗುವುದು.