Home Local ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಹೂವಿನ ಪೂಜೆ

ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಹೂವಿನ ಪೂಜೆ

SHARE

ಕುಮಟಾ : ತಾಲೂಕಿನ ಶಕ್ತಿಕ್ಷೇತ್ರ ಹಾಗೂ ಗ್ರಾಮದೇವಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಪ್ರತೀ ವರ್ಷದಂತೆ ಇಂದು ಹೂವಿನ ಪೂಜೆಯನ್ನು ಹಮ್ಮಿಕೊಳ್ಳಲಾಗಿತ್ತು. ತಾಯಿ ಸರ್ವಾಲಂಕಾರ ಭೂಷಿತೆಯಾಗಿ ಇಂದು ಕಂಗೊಳಿಸಿದಳು, ವರ್ಷದಿಂದ ವರ್ಷಕ್ಕೆ ಅದ್ದೂರಿಯಾಗಿ ಹೂವಿನ ಪೂಜಾ ಸೇವೆಯನ್ನು ಇಲ್ಲಿಯ ಭಕ್ತ ಮಂಡಳಿ ನೀಡುತ್ತ ಬಂದಿದೆ.

 

ಸುಮಾರು 50 ಸಾವಿರಕ್ಕೂ ಹೆಚ್ಚು ಬೆಲೆಯ ಹೂವಿನಿಂದ ಸಂಪೂರ್ಣ ದೇವಾಲಯ ಹೂಮಯವಾಗಿಸಿದ್ದಾರೆ ಸ್ಥಳೀಯರು. ತಮ್ಮದೆ ಆದ ಕಲೆಯಿಂದ ಹೂವಿನಿಂದ ದೇವಾಲಯದ ಅಂದ ಹೆಚ್ಚಿಸಿದ್ದಾರೆ.ಇದರಲ್ಲಿ ಹೂವುಗಳಾದ ಡೇರೆ,ಸೇವಂತಿಗೆ,ಪಾರಿಜಾತ,ಕನಕಾಂಬರ,ಹೀಗೆ ನೂರಾರು ವಿಧದ ಹೂವಗಳನ್ನು ಬಳಸಿ ಹೂವಿನ ಮಂಟಪವನ್ನು ರಚಿಸಲಾಗಿದೆ. ಇದನ್ನು ನೋಡಲು ತಾಲೂಕಿನ ಜನತೆ ಮುಗಿಬಿಳುತ್ತಿದ್ದಾರೆ.