Home Local ಕುಮಟಾದ ದೇವಾಲಯಕ್ಕೆ ಕನ್ನ ಹಾಕಿದ್ದ ಕಳ್ಳನ ಬಂಧನ!

ಕುಮಟಾದ ದೇವಾಲಯಕ್ಕೆ ಕನ್ನ ಹಾಕಿದ್ದ ಕಳ್ಳನ ಬಂಧನ!

SHARE

ಕುಮಟಾದಲ್ಲಿ ದೇವಾಲಯ ಹಾಗೂ ನಿರಂತರವಾಗಿ ಮನೆಗಳ್ಳತನ ನಡೆಯುತ್ತಿದ್ದು ಇದು ಪೋಲೀಸರಿಗೆ ತಲೆನೋವಾಗಿ ಪರಿಣಮಿಸಿತ್ತು.

ಸೆಪ್ಟೆಂಬರ್ 14 ರಂದು ಬೆಳಗಿನ ಜಾವ ತಂಡ್ರಕುಳಿಯ ಬೊಂಬೆ ಲಿಂಗೇಶ್ವರ ದೇವಸ್ಥಾನ ಮತ್ತು ಮಿರ್ಜಾನ್ ದುರ್ಗಾದೇವಿ ದೇವಸ್ಥಾನ ದಲ್ಲಿ ಕಳ್ಳತನ ನಡೆದಿತ್ತು . ಗ್ರಾಮಸ್ಥರು ಕಳ್ಳನನ್ನು ಕಂಡುಹಿಡಿಯಲು ತನಿಖೆಗೆ ಆಗ್ರಹಿಸಿದ್ದರು. ಈ ಹಿನ್ನೆಲೆಯಲ್ಲೇ ಪಿ.ಎಸ್.ಐ ಪದವಿಗೆ ಆಯ್ಕೆಯಾಗಿರುವ ಪವನ್ ನಾಯ್ಕ ಮಾದನಗೇರಿ ಇವರು ಕಳ್ಳನು ಮಾದನಗೇರಿಯಲ್ಲಿ ಮನೆ ಕಳ್ಳತನ ಮಾಡುವ ಸಂದರ್ಭದಲ್ಲಿ ಕಳ್ಳನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಪವನ್ ನಾಯ್ಕ ಅವರ ಕೆಲಸಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಈ ಕಳ್ಳನ ಬಂಧನದಿಂದಾಗಿ ಜನತೆ  ಸ್ವಲ್ಪ ಮಟ್ಟಿಗೆ ನಿರಾಳರಾದಂತಾಗಿದೆ.