Home Local ಸಂಗೀತ ಕಾರ್ಯಾಗಾರ

ಸಂಗೀತ ಕಾರ್ಯಾಗಾರ

SHARE

ಶಿರಸಿ:  ಝೇಂಕಾರ ಸಂಗೀತ ಸೇವಾ ಟ್ರಸ್ಟ್ (ರಿ) ಇವರಿಂದ ಮೂರು ದಿನಗಳ ಸುಗಮ ಸಂಗೀತ ಕಾರ್ಯಾಗಾರವು ಮೇ 25, 26, 27 ರಂದು ಯೋಗ ಮಂದಿರ ಶಿರಸಿಯಲ್ಲಿ ಬೆಳಿಗ್ಗೆ 10.30 ರಿಂದ 1.00 ಹಾಗೂ ಮಧ್ಯಾಹ್ನ 2.30 ರಿಂದ 5.00 ಘಂಟೆಯವರೆಗೆ ನಡೆಯಲಿದೆ. ಸುಗಮ ಸಂಗೀತ ಕ್ಷೇತ್ರದಲ್ಲಿ ಚಿಕ್ಕವಯಸ್ಸಿನಲ್ಲೇ ದೊಡ್ಡ ಸಾಧನೆಯನ್ನು ಮಾಡಿ ನಮ್ಮ ಜಿಲ್ಲೆಯವರೇ ಆಗಿ ಈಗ ಬೆಂಗಳೂರಿನ ನಿವಾಸಿಯಾಗಿರುವ ಸುಗಮ ಸಂಗೀತ ಕ್ಷೇತ್ರದಲ್ಲಿ ಕ್ರೀಯಾಶೀಲರಾಗಿರುವ ಅಂತರಾಷ್ಟ್ರೀಯ ಕಲಾವಿದ “ಗಾನಸಾರಥಿ” ಗಣೇಶ ದೇಸಾಯಿ ಬೆಂಗಳೂರು ಇವರು ಮೂರು ದಿನಗಳ ಸುಗಮ ಸಂಗೀತ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಲಿದ್ದಾರೆ.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭವು ಮೇ 27 2017 ಮಧ್ಯಾಹ್ನ 4.00 ರಿಂದ ಯೋಗಮಂದಿರ ಶಿರಸಿಯಲ್ಲಿ ಜರುಗಲಿದೆ. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಕಡೂರ ಕ್ಷೇತ್ರದ ಶಾಸಕ ವೈ ಎಸ್.ವಿ. ದತ್ತಾ ಇವರು ನೆರವೇರಿಸಲಿದ್ದು ಅಧ್ಯಕ್ಷತೆಯನ್ನು ಝೇಂಕಾರ ಸಂಗೀತ ಸೇವಾ ಟ್ರಸ್ಟ ನ ಅಧ್ಯಕ್ಷ ಪರಮೇಶ್ವರ ಜಿ. ಹೆಗಡೆ, ಕೆಳಗಿನ ಓಣಿಕೇರಿ ವಹಿಸಲಿದ್ದಾರೆ. ಗಣೇಶ ದೇಸಾಯಿ, ಬೆಂಗಳೂರು ಇವರ ಗೌರವ ಉಪಸ್ಥಿತಿಯಿದ್ದು ಮುಖ್ಯ ಅತಿಥಿ ಸಾಹಿತಿ ಮತ್ತು ಅಂಕಣಕಾರ ಸಂತೋಷಕುಮಾರ ಮೆಹಂದಳೆ, ಖ್ಯಾತ ಉದ್ಯಮಿ ಉಪೇಂದ್ರ ಪೈ, ದಿ.ಹೋ. ಅ. ಬಳಗ ಶಿರಸಿ ಇದರ ಅಧ್ಯಕ್ಷ ಸೂರ್ಯಪ್ರಕಾಶ ಹೊನ್ನಾವರ, ಹಿರಿಯ ಸಾಹಿತಿ ವಿ.ಪಿ. ಹೆಗಡೆ ವೈಶಾಲಿ, ಸಾಮಾಜಿಕ ಕಾರ್ಯಕರ್ತೆ ರಾಜೇಶ್ವರಿ ಹೆಗಡೆಯವರು ಆಗಮಿಸಲಿದ್ದಾರೆ.
ನೇತ್ರಾವತಿ ಟಿ. ಹಳೇಮನೆ ಇವರು ಕಾರ್ಯಕ್ರಮಕ್ಕೆ ಶುಭಕೋರಲಿದ್ದು ಸಂಪನ್ಮೂಲ ವ್ಯಕ್ತಿ ಗಣೇಶ ದೇಸಾಯಿ ಬೆಂಗಳೂರು ಇವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವಿರುತ್ತದೆ. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿಗಳಿಂದ ಪ್ರತಿಭಾ ಪ್ರದರ್ಶನ ಇರುತ್ತದೆ.
ಸಂಪನ್ಮೂಲ ವ್ಯಕ್ತಿಗಳಾದ ಗಣೇಶ ದೇಸಾಯಿ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ ಕಾರ್ಯಕ್ರಮದ ಯಶಸ್ಸಿನಲ್ಲಿ ಪಾಲ್ಗೊಳ್ಳಬೇಕಾಗಿ ಉಮಾ ಮಹೇಶ ಹೆಗಡೆ, ಕಾರ್ಯದರ್ಶಿ ಝೇಂಕಾರ ಸಂಗೀತ ಸೇವಾ ಟ್ರಸ್ಟ, (ರಿ) ಇವರು ವಿನಂತಿಸಿರುತ್ತಾರೆ.