Home Local ಹೊನ್ನಾವರದಲ್ಲಿ ರಚನೆಯಾಯ್ತು ಗಾ.ಪಂ ಮಟ್ಟದವರೆಗೆ ಗೋ ಪರಿವಾರ

ಹೊನ್ನಾವರದಲ್ಲಿ ರಚನೆಯಾಯ್ತು ಗಾ.ಪಂ ಮಟ್ಟದವರೆಗೆ ಗೋ ಪರಿವಾರ

SHARE

ಹೊನ್ನಾವರ : ತಾಲೂಕಿನ ವಿವಿಧ ಗ್ರಾಮ ಪಂ. ವ್ಯಾಪ್ತಿಯ ಗೋಪರಿವಾರ ಉದ್ಘೋಷಣೆ ಕಾರ್ಯಕ್ರಮ ಯಶಸ್ವಿಯಾಗಿ ಸಂಪನ್ನವಾಗಿದೆ.
ಹವ್ಯಕ ಸಭಾಭವನ ಹೊನ್ನಾವರದಲ್ಲಿ ನಡೆದ ಈ ಕಾರ್ಯಕ್ರಮ ಶಂಖನಾದ, ಗುರುವಂದನೆ, ಗೋವಂದನೆಗಳೊಂದಿಗೆ ಆರಂಭವಾಯಿತು. ಪ್ರಾರಂಭದಲ್ಲಿ ಗೋಗೀತೆಯನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಲಾಯಿತು.

 
ಕಾರ್ಯದರ್ಶಿ ಡಾ. ವಿಶ್ವೇಶ್ವರ ಭಟ್ ಸ್ವಾಗತಿಸಿ, ಪ್ರಸ್ತಾವಿಸಿದರು. ನೂತನವಾಗಿ ರಚಿಸಲ್ಪಟ್ಟ ಚಂದಾವರ,ಮುಗ್ವಾ, ಹಡಿನಬಾಳ, ಖರ್ವಾ, ಕರ್ಕಿ,ಹೊಸಾಕುಳಿ,ಕಡ್ಲೆ,ಸಾಲಕೋಡ ಹಾಗೂ ಹೊನ್ನಾವರ ಪಟ್ಟಣ ವ್ಯಾಪ್ತಿಯ ಗೋ ಪರಿವಾರವನ್ನು ತಾಲೂಕಾ ಗೋಪರಿವಾರ ಸಹಕಾರ್ಯದರ್ಶಿ ಶ್ರೀ ಶ್ರೀಧರ ಭಟ್ ಉಪ್ಪೋಣಿ ಘೋಷಿಸದರು. ಹೊನ್ನಾವರ ಗೋ ಪರಿವಾರ ಅಧ್ಯಕ್ಷ ಶ್ರೀಯೋಗೇಶ ರಾಯ್ಕರ್ ಅಭಯಾಕ್ಷರ ಪ್ರತಿಗಳನ್ನು ಹಸ್ತಾಂತರಿಸಿದರು. ಮಾಜಿ ಶಾಸಕ ಡಾ.ಎಂ.ಪಿ.ಕರ್ಕಿ, ಉ.ಕ ಜಿಲ್ಲಾ ಗೋಪರಿವಾರದ ಕಾರ್ಯದರ್ಶಿ ಶ್ರೀ ಪ್ರಕಾಶ ಭಟ್ಟ ಹಂದಿಗೋಣ, ಶ್ರೀ ಸುರೇಶ್ ಶೇಟ್, ಹೊನ್ನಾವರ ತಾಲೂಕಾ ಗೋಪರಿವಾರದ ಅಧ್ಯಕ್ಷ ಶ್ರೀಯೋಗೇಶ ರಾಯ್ಕರ್, ಜಿಲ್ಲಾ ಪಂಚಾಯತ ಸದಸ್ಯೆ ಶ್ರೀಮತಿ ಶ್ರೀಕಲಾ ಶಾಸ್ತ್ರಿ, ಗೋ ಪರಿವಾರ ಉಪಾಧ್ಯಕ್ಷ ಶ್ರೀ ಪಿ.ಟಿ ನಾಯ್ಕ ಮೂಡ್ಕಣಿ, ಮುಗ್ವಾ ಪಂಚಾಯತ ಅಧ್ಯಕ್ಷ ಶ್ರೀ ಟಿ ಎಸ್ ಹೆಗಡೆ, ಕರ್ಕಿ ಪಂಚಾಯತ ಅಧ್ಯಕ್ಷ ಶ್ರೀ ಶ್ರೀಕಾಂತ ಮೊಗೇರ, ಹಡಿನಬಾಳ ಪಂ. ಅಧ್ಯಕ್ಷ ಶ್ರೀ ಚಂದ್ರಹಾಸ ನಾಯ್ಕ, ಕಡ್ಲೆ ಪಂಚಾಯತದ ಶ್ರೀ ಗಜಾನನ ಮಡಿವಾಳ, ಜಿಲ್ಲಾ ಗೋಪರಿವಾರದ ಶ್ರೀಮತಿ ಲಲಿತಾ ಹೆಗಡೆ ಕರ್ಕಿ, ಹೊನ್ನಾವರ ಗೋಪರಿವಾರದ ಸದಸ್ಯರು, ನೂತನ ಗೋಪರಿವಾರದ ಸದಸ್ಯರು, ಹೊನ್ನಾವರ ಹವ್ಯಕ ಮಂಡಲದ ಪದಾಧಿಕಾರಿಗಳು, ಗೋಭಕ್ತರು ಹಾಜರಿದ್ದರು.

 

ಹೊನ್ನಾವರ ಮಂಡಲದ ಅಧ್ಯಕ್ಷ ಶ್ರೀ ರಾಜು ಹೆಬ್ಬಾರ ನಿರೂಪಿಸಿದರು. ಗೋಮಹತ್ವ ಹಾಗೂ ಗೋಪರಿವಾರದ ರಚನೆಗಳೊಳಗೊಂಡ ಪ್ರಸ್ತುತಿ ಪ್ರದರ್ಶಿಸಲಾಯಿತು.