Home Local ದನ ಹುಡುಕಲು ಹೋದವನಿಗೆ ತಗುಲಿದ ಗುಂಡು! ಜನತೆಯಲ್ಲಿ ಆತಂಕ

ದನ ಹುಡುಕಲು ಹೋದವನಿಗೆ ತಗುಲಿದ ಗುಂಡು! ಜನತೆಯಲ್ಲಿ ಆತಂಕ

SHARE

ಶಿರಸಿ: ತಾಲೂಕಿನ ಚಿಕ್ಕ ಬೆಂಗಳೆ ಅರಣ್ಯ ಪ್ರದೇಶದಲ್ಲಿ ದನ ಹುಡುಕಲು ಹೋದ ಯುವಕನೊಬ್ಬನಿಗೆ ಕ್ರಷ್ಣಮೂರ್ತಿ ಬಸಪ್ಪ ನಾಯ್ಕ ಅಪರಿಚಿತರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿದ್ದಾರೆ.

ಕ್ರಷ್ಣಮೂರ್ತಿ ನಾಯ್ಕ (೨೭) ಗಾಯಗೊಂಡ ಯುವಕನಾಗಿದ್ದಾನೆ. ಚಿಕ್ಕ ಬೆಂಗ್ಳೆ ಕಾಡಿನಲ್ಲಿ ದನ ಹುಡುಕಲು ಹೋದಾಗ ಅಪರಿಚಿತರು ಹಾರಿಸಿದ ಗುಂಡು ತೊಡೆಭಾಗಕ್ಕೆತಗುಲಿ ತೀವೃಗಾಯವಾಗಿದ್ದು ಜೀವಾಪಾಯದಿಂದ ಪಾರಾಗಿದ್ದಾನೆಂದು ತಿಳಿದು ಬಂದಿದೆ. ಈ ಕುರಿತು ಬನವಾಸಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.