Home Local ಅಶಕ್ತರ ಸಹಾಯಾರ್ಥ ಚಿಣ್ಣರ ಯಕ್ಷಗಾನ : ಕುಮಟಾದಲ್ಲಿ ಕಾರ್ಯಕ್ರಮ

ಅಶಕ್ತರ ಸಹಾಯಾರ್ಥ ಚಿಣ್ಣರ ಯಕ್ಷಗಾನ : ಕುಮಟಾದಲ್ಲಿ ಕಾರ್ಯಕ್ರಮ

SHARE

ಕುಮಟಾ : ಪ್ರಸಿದ್ಧ ಯಕ್ಷಗಾನ ಭಾಗವತರಾದ ಜಿ.ಕೆ.ಹೆಗಡೆಯವರ ನೇತ್ರತ್ವದಲ್ಲಿ ಅಶಕ್ತರ ಸಹಾಯಾರ್ಥ ಕುಮಟಾದ ಹವ್ಯಕ ಸಭಾಭವನದಲ್ಲಿ ಯಕ್ಷಗಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಅಶಕ್ತರಾದ ತಾರಾ ಅನಂತ ಪಟಗಾರ ಮತ್ತು ರಾಘವ ಪಟಗಾರ ಇವರಿಗೆ ಸಹಾಯಧನ ನೀಡುತ್ತಾ ಮಾತನಾಡಿಜಿ.ಕೆ.ಹೆಗಡೆಯವರು ಹಲವಾರು ವರ್ಷಗಳಿಂದ ಯಕ್ಷಗಾನಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಇಂದು ಅಶಕ್ತರ ಸಹಾಯಾರ್ಥವಾಗಿ ಈ ಚಿಣ್ಣರ ಯಕ್ಷಗಾನವನ್ನು ಸಂಯೋಜಿಸಿದ್ದಲ್ಲದೇ ತಮಗೆ ಸಂದಾಯವಾಗುವ ಹಣವನ್ನೂಕೂಡಾ ಪೀಡಿತರಿಗೆ ನೀಡುವುದರ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆಎಂದು ಶ್ಲಾಘಿಸಿದರು. ಬಿಜೆಪಿ ಪ್ರಮುಖರಾದ ದಿನಕರ ಶೆಟ್ಟಿಯವರುಕೂಡಾಅಶಕ್ತರಿಗೆಧನಸಹಾಯ ನೀಡಿದರು.
ಈ ಸಂದರ್ಭದಲ್ಲಿತಾ.ಪಂ. ಸದಸ್ಯಜಗನ್ನಾಥ ನಾಯ್ಕ , ಶ್ರೀಧರ ನಾಯ್ಕ ವಕ್ನಳ್ಳಿ, ಗಣೇಶ ಭಟ್ಟ ಮುಂತಾದವರು ಉಪಸ್ಥಿತರಿದ್ದರು.ನಂತರಕನಕಾಂಗಿ ಕಲ್ಯಾಣ ಎಂಬ ಯಕ್ಷಪ್ರಸಂಗಜರುಗಿತು.