Home Local ಫಾಸ್ಟ್ ಫುಡ್ ಮಾರಾಟ ಮಾಡುತ್ತಿದ್ದರು ದೊಡ್ಡ ಕಳ್ಳರು!

ಫಾಸ್ಟ್ ಫುಡ್ ಮಾರಾಟ ಮಾಡುತ್ತಿದ್ದರು ದೊಡ್ಡ ಕಳ್ಳರು!

SHARE

ಶಿವಾಸಿಂಗ್ ಬಹುದ್ದೂರ್, ಕಮರ್ ಸಿಂಗ್, ರಮೇಶ್ ಸಿಂಗ್ ಪಾರ್ಕಿ, ಹರ್ಕ್ ಬಹುದ್ದೂರ್ ಸೌದ್, ಪ್ರೇಮ್ ಬಹುದ್ದೂರ್ ಸೌದ್ ಬಂಧಿತರು. ಆರೋಪಿಗಳು ಬೈಂದೂರಿನ ಶೀರೂರಿನಲ್ಲಿ ಗೂರ್ಖಾ ಹಾಗೂ ಫಾಸ್ಟ್ ಫುಡ್ ಮಾಡುತ್ತ ಜೀವನ ಸಾಗಿಸುತ್ತಿದ್ದರು. ಇವರು ವಾಸವಿದ್ದ ಸ್ಥಳದ ಸಮೀಪದಲ್ಲಿದ್ದ  ಗೋಲ್ಡ್ ಪ್ಯಾಲೇಜ್ ಆಭರಣ ಮಳಿಗೆಯನ್ನು ಟಾರ್ಗೆಟ್ ಮಾಡಿ ಕಳೆದ ಏಪ್ರಿಲ್ ತಿಂಗಳಲ್ಲಿ ಕಳವು ನಡೆಸಿದ್ದರು.

ಕಳವು ನಡೆಸಿದ ನಂತರ ನೇಪಾಳಕ್ಕೆ ಹೋಗಿ ಮತ್ತೆ ಬೈಂದೂರಿಗೆ ಬಂದು ಜೀವನ ಸಾಗಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ  ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು. ಬಂಧಿತರಿಂದ 3 ಕೆ.ಜಿಯ ಬೆಳ್ಳಿ ಕಾಲು ಚೈನ್ ಗಳನ್ನು ವಶಕ್ಕೆ ಪಡೆಯಲಾಗಿದೆ.