Home Local ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್

ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್

SHARE

ಕುಮಟಾ: ಇತ್ತೀಚೆಗೆ ಭಟ್ಕಳದ ಬೆಳ್ಕೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಚಿತ್ರಿಗಿ ಮಹಾತ್ಮಾ ಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚಾಂಪಿಯನ್‍ರಾಗಿ ವಲಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

 

ವಿದ್ಯಾರ್ಥಿನಿಯರಾದ ಹೇಮಾ ಎಸ್. ಪಟಗಾರ, ಕಾಂಚಿಕಾ ಜಿ. ಮಡಿವಾಳ, ಸುಪ್ರಿಯಾ ವಿ.ನಾಯ್ಕ, ತನುಜಾ ಡಿ. ಗೌಡ, ಸಿಂಡ್ರೆಲ್ಲಾ ಎಂ. ಫರ್ನಾಂಡಿಸ್, ಪಲ್ಲವಿ ಎನ್. ಹರಿಕಾಂತ, ಜೆನ್ ಆಯ್. ಫರ್ನಾಂಡಿಸ್, ತನುಜಾ ಎಸ್. ನಾಯ್ಕ ವಿಜೇತ ತಂಡದ ಸದಸ್ಯರಾಗಿದ್ದಾರೆ. ದೈಹಿಕ ಶಿಕ್ಷಕ ಲಕ್ಷ್ಮಣ ಅಂಬಿಗ, ತಂಡದ ಮುಖ್ಯಸ್ಥರಾದ ಪ್ರದೀಪ ನಾಯ್ಕ ಮತ್ತು ಸ್ವಾತಿ ನಾಯ್ಕ ಇವರಿಗೆ ಮಾರ್ಗದರ್ಶನ ನೀಡಿದ್ದರು.