Home Local ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು

ಆತ್ಮಲಿಂಗ ಪೂಜೆ ನೆರವೇರಿಸಿದ ಪ ಪೂ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು

SHARE
ಪ ಪೂ ಶ್ರೀ ಶ್ರೀ ಪರಮಾನಂದ ಸ್ವಾಮಿಗಳು , ತೆಲಿಗಿಮಠ, ದಾವಣಗೆರೆ      ಇವರು  ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ  “ಗೋಕರ್ಣ ಗೌರವ”  ಕಾರ್ಯಕ್ರಮದಲ್ಲಿ ಭಾಗವಹಿಸಿ  ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .
 
            ಉಪಾಧಿವಂತ ಮಂಡಳಿ ಸದಸ್ಯ ವೇ ಗೋಪಾಲಕೃಷ್ಣ ಭಟ್ ಕೊಡಗಿ   ಇವರು   ದೇವಾಲಯದ  ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ,  ತಾಮ್ರಪತ್ರ  ಸ್ಮರಣಿಕೆ ನೀಡಿ, ಗೌರವಿಸಿದರು.  ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ  ಮಹಾಬಲೇಶ್ವರ ಭಟ್   ಮಾರಿಗೋಳಿ  ಇವರು  ಪೂಜಾ ಕೈಂಕರ್ಯ ನೆರವೇರಿಸಿದರು .