Home Local ಅಮಾಯಕ ಹಿಂದೂ ಯುವಕರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕು.

ಅಮಾಯಕ ಹಿಂದೂ ಯುವಕರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕು.

SHARE

ಕುಮಟಾ : ಭಟ್ಕಳದಲ್ಲಿ ಸರ್ಕಾರಿ ಪ್ರಾಯೋಜಿತದಲ್ಲಿ ಭಯೊತ್ಪಾಧನೆ ಮಾಡಲಾಗುತ್ತಿದೆ ಎಂದು ಆರೋಪಿಸಿ ಕುಮಟಾ ಹಿಂದೂ ಜಾಗರಣಾ ವೇದಿಕೆಯ ವತಿಯಿಂದ ಕುಮಟಾ ಗಿಬ್ ಹೈಸ್ಕೂಲ್ ವೃತ್ತದಿಂದ ಕುಮಟಾ ತಹಸಿಲ್ದಾರ ಕಛೇರಿವರೆಗೆ ರ್ಯಾಲಿ ನಡೆಸಿ ಜಿಲ್ಲಾಧಿಕಾರಿಗಳಿಗೆ ಮತ್ತು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅವರಿಗೆ ತಹಸಿಲ್ದಾರ ಮೇಘರಾಜ ನಾಯ್ಕ ಮೂಲಕ ಮನವಿ ಸಲ್ಲಿಸಲಾಯಿತು. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ನಗರದಲ್ಲಿ ಹಿಂದೂಗಳನ್ನು ಒಕ್ಕಲೆಬ್ಬಿಸುವ ಉದ್ದೆಶದಿಂದ ಸರ್ಕಾರವೇ ಹಿಂದೂಗಳ ವಿರುದ್ದ ಅತ್ಯಂತ ಅಮಾನವಿಯ ಭಯೋತ್ಪಾಧನೆಯನ್ನು ನಡೆಸುತ್ತಿದೆ. ಈ ಪರಿಣಾಮವಾಗಿ ಪುರಸಭೆಯ ಮಳಿಗೆಯಲ್ಲಿ ವ್ಯಾಪಾರ ಮಾಡುತಿದ್ದ ರಾಮಚಂದ್ರ ನಾಯ್ಕ ಸಾವನೊಪ್ಪಿದ್ದಾನೆ. ಇದು ಆಕಸ್ಮಿಕ ಅಲ್ಲ ವೈವಸ್ಥಿತವಾದ ಕೊಲೆ. ಈ ಸಾವಿನ ಹಿಂದೆ ಕರ್ನಾಟಕ ಸರಕಾರದ ವೈವಸ್ಥಿತ ಪ್ರಚೋಧನೆ ಇದೆ ಎನ್ನುವುದು ಕಂಡುಬರುತ್ತಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ಸಂಚಾಲಕ ಬಾಸ್ಕರ ನಾಯ್ಕ ಆಕ್ರೋಶ ವೈಕ್ತಪಡಿಸಿದ್ರು.

 

ನಂತರ ಮಾತನಾಡಿದ ಬಿ.ಜೆ.ಪಿ ಮುಖಂಡ ಸೂರಜ್ ನಾಯ್ಕ ಸೋನಿ ಈ ಘಟನೆಯನ್ನು ಗಮನಿಸಿದಾಗ ಪುರಸಭೆ ಮಳಿಗೆಯನ್ನು ಪ್ರಚಲಿತದಲ್ಲಿರುವ ಬೆಲೆಗಿಂತಲು ನೂರಾರು ಪಟ್ಟು ಹೆಚ್ಚು ಬೆಲೆಯನ್ನು ಹಿಂದೂ ವಿರೋಧಿಗಳಿಂದ ಹರಾಜಿನಲ್ಲಿ ಕೂಗಿ ಉದ್ದೆಶಪೂರ್ವಕವಾಗಿ ಮಳಿಗೆ ಕೈ ತಪ್ಪುವಂತೆ ಮಾಡಿದ್ದಾರೆ. ಇದು ಸಂಪೂರ್ಣ ಹಿಂದೂಗಳ ಒಕ್ಕಲೆಬ್ಬಿಸುವ ಕಾರ್ಯವಾಗಿದೆ. ಅಧಿಕಾರಿಗಳಿಂದ ಆದಾಯಗಿಂತ ಹೆಚ್ಚು ಬೆಲೆಯನ್ನು ಕೊಟ್ಟು ಮಳಿಗೆ ಖರಿದಿ ಮಾಡಿದವರ ಬಗ್ಗೆ ತನಿಖೆಯಾಗಲಿ ಎಂದರು.

 

ಘಟನೆಯಲ್ಲಿ ಮೃತಪಟ್ಟವನಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಮತ್ತು ಈ ಸಂಬಂದ ಅಮಾಯಕ ಹಿಂದೂ ಯುವಕರ ಮೇಲೆ ದಾಖಲಿಸಿರುವ ಪ್ರಕರಣವನ್ನು ಹಿಂಪಡೆದುಕೊಳ್ಳಬೇಕು,ತಜಿಂ ನಾಯಕರು ಹಾಗೂ ಪುರಸಭಾ ಅಧಿಕಾರಿಗಳ ಮೇಲೆ 306 ಪ್ರಕರಣಾ ದಾಖಲಿಸಬೇಕು, ಮತ್ತು ಪುರಸಭಾ ಮಳಿಗೆಯನ್ನು ಮೊದಲು ನಡೆಸುತ್ತಿರುವ ಹಿಂದೂಗಳಿಗೆ ಪನಃ ನೀಡಬೇಕು ಎನ್ನುವ ಬೇಡಿಕೆಯನ್ನು ಮುಂದಿಡಲಾಗಿದೆ. ಒಂದು ವೇಳೆ ಈಡೆರಿಸದೆ ಇದ್ದರೆ ಉಗ್ರ ಪ್ರತಿಭಟನೆ ಕ್ಯಗೊಳ್ಳಲಾಗುವುದು ಎಂದು ಎಚ್ಚರಿಸಿದ್ರು. ಇದು ಸಾಂಕೇತಿಕ ಮನವಿ ಅಷ್ಟೆ ಅಲ್ಲ ಹಿಂದೂಗಳು ಎಚ್ಚೆತ್ತುಕೊಂಡಿದ್ದಾರೆ ಎನ್ನುವ ಎಚ್ಚರಿಕೆಯಾಗಿದೆ ಎಂದು ಆಕ್ರೋಶ ವೈಕ್ತ ಪಡಿಸಿದ್ದಾರೆ. ಈ ಸಂದರ್ಭದಲ್ಲಿ ಬಿ.ಜೆ.ಪಿ ತಾಲೂಕಾಧ್ಯಕ್ಷ ಕುಮಾರ ಮಾರ್ಕೇಂಡೆ.ಯಶೋಧರ ನಾಯ್ಕ,ಜಿ,ಜಿ,ಹೆಗಡೆ,ಗಾಯತ್ರಿ ಗೌಡ, ಸೇರಿದಂತೆ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ ಮತ್ತು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಇದ್ದರು..