Home Local ಉ.ಕ ದಲ್ಲಿ ಅಭಯಾಕ್ಷರಕ್ಕೆ 10 ರಿಂದ 11 ಲಕ್ಷ ಸಹಿ ಸಂಗ್ರಹಿಸುವ ಗುರಿ : ಸುಬ್ರಾಯ...

ಉ.ಕ ದಲ್ಲಿ ಅಭಯಾಕ್ಷರಕ್ಕೆ 10 ರಿಂದ 11 ಲಕ್ಷ ಸಹಿ ಸಂಗ್ರಹಿಸುವ ಗುರಿ : ಸುಬ್ರಾಯ ಭಟ್ಟ

SHARE

ಪಟ್ಟಣದ ಶ್ರೀಗುರುಜ್ಯೋತಿಯಲ್ಲಿ ಜರುಗಿದ ಸಿದ್ದಾಪುರ ವಲಯದ ವಿಶೇಷ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು  ರಾಘವೇಶ್ವರ ಭಾರತೀ ಶ್ರೀಗಳವರು ಚಾಲನೆಗೆ ತಂದಿರುವ ಗೋ ಸಂಜೀವಿನಿ ಹಾಗೂ ಗೋ ಪ್ರಾಣಭಿಕ್ಷೆ ಯೋಜನೆಗಳಿಗೆ ಶಿಷ್ಯಕೋಟಿಯಿಂದ ಅತ್ಯುತ್ತಮ ಪ್ರತಿಕ್ರಿಯೆ ಬರುತ್ತಿದೆ. ಸಿದ್ದಾಪುರ ಮಂಡಲ ವ್ಯಾಪ್ತಿಯಲ್ಲಿ ಕನಿಷ್ಟ 1ಲಕ್ಷ ಸಹಿ ಸಂಗ್ರಹವಾಗುವಂತೆ ಗೋ ಪರಿವಾರದೊಂದಿಗೆ ಪ್ರಯತ್ನಶೀಲರಾಗಬೇಕು. ವಲಯಗಳಲ್ಲಿ ಸಂಧ್ಯಾಮಂಗಲ ಕಾರ್ಯಕ್ರಮ ನಡೆಸಿ. ರಾಮಾಯಣ ಪಾರಾಯಣದ ನಿಗದಿತ ಗುರಿ ಪೂರ್ತಿಗೊಳಿಸಿ ಎಂದು ಹೇಳಿದರು.

ಮೂಲಮಠ ಸಮಿತಿ ಅಧ್ಯಕ್ಷ ಆರ್.ಎಸ್.ಹೆಗಡೆ ಹರಗಿ ಮಾತನಾಡಿ ಮೂಲಮಠದ ನವೀನ ಕಟ್ಟಡ ನಿರ್ಮಾಣ ಕಾರ್ಯ, ವಿದ್ಯಾಮಂದಿರ ಹಾಗೂ ಭೋಜನ ಶಾಲೆಯ ಕಾರ್ಯ ಪ್ರಗತಿಯಲ್ಲಿದೆ. ಆದಿಗುರು ಶ್ರೀಶಂಕರಾಚಾರ್ಯರ ಹಾಗೂ ಶ್ರೀದೈವರಾತರ ಮೂರ್ತಿ ಪ್ರತಿಷ್ಠಾಪಿಸುವ ಯೋಜನೆ ನಡೆಯುತ್ತಿದೆ ಎಂದರು.

ಪ್ರವೀಣ ಭೀಮನಕೋಣೆ, ಶ್ರೀನಾಥ ಸಾರಂಗ ಕೋಗೋಡ, ಕಲ್ಪನಾ ತಲವಾಟ, ಭಾಸ್ಕರ ಹೆಗಡೆ ಕೊಡಗಿಬೈಲ, ರುಕ್ಮಾವತಿ ಸಾಗರ, ಮಲ್ಲಿಕಾ ಕಲ್ಲಡ್ಕ, ಜಿ.ಎಸ್.ಭಟ್ಟ ಕಲ್ಲಾಳ, ಸತೀಶ ಆಲ್ಮನೆ, ವೀಣಾ ಪ್ರಭಾಕರ ಭಟ್ಟ ಶಿರಸಿ,ಧರ್ಮಪ್ರಧಾನ ಮಂಜುನಾಥ ಭಟ್ಟ ಕವ್ಲಮನೆ, ಶ್ರೀಕಾಂತ ಕೊಳಗಿ, ಎಂ.ವಿ.ಹೆಗಡೆ ವಡ್ಡಿನಗದ್ದೆ, ಕೆಕ್ಕಾರ ನಾಗರಾಜ ಭಟ್ಟ ಇತರರಿದ್ದರು.