Home Local ಶಂಕರ ನಾಯ್ಕರ ಬಂಧನ: ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆ

ಶಂಕರ ನಾಯ್ಕರ ಬಂಧನ: ಬಂಧಿತರ ಸಂಖ್ಯೆ ೧೫ಕ್ಕೆ ಏರಿಕೆ

SHARE

ಭಟ್ಕಳ: ಇಲ್ಲಿನ ಪುರಸಭೆಗೆ ಕಲ್ಲು ತೂರಾಟ ಮಾಡಿರುವ ಹಾಗೂ ಅಂದಿನ ಗಲಭೆಗೆ ಕಾರಣ ಎಂಬ ಆರೋಪದ ಮೇರೆಗೆ ರಾಮಸೇನೆಯ ಉತ್ತರ ಪ್ರಾಂತದ ವಕ್ತಾರ, ಚೌಥನಿಯ ಶಂಕರ ನಾಯ್ಕ ಹಾಗೂ ಮುಂಡಳ್ಳಿಯ ದೇವೇಂದ್ರ ನಾಯ್ಕ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ಆ ಮೂಲಕ ಬಂಧಿತರ ಸಂಖ್ಯೆ ೧೫ಕ್ಕೆ ಏರಿದೆ. ಬುಧವಾರವಷ್ಟೇ ನಾಮಧಾರಿ ಅಭಿವೃದ್ಧಿ ಸಂಘ ಹಾಗೂ ಬಿಜೆಪಿಯ ಕುಮಟಾ, ಹೊನ್ನಾವರ, ಭಟ್ಕಳ ಘಟಕಗಳು ಯಾರನ್ನೂ ಬಂಧಿಸದಂತೆ ಹಾಗೂ ಬಂಧಿತರನ್ನು ಬಿಡುಗಡೆ ಮಾಡುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ನೀಡಿದ್ದವು. ಅದರ ಬೆನ್ನಲ್ಲೇ ಇಂದು ಪೊಲೀಸರು ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಿ, ತಾಲ್ಲೂಕು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಇಬ್ಬರನ್ನೂ ಕಾರವಾರ ಕಾರಾಗ್ರಹಕ್ಕೆ ರವಾನಿಸಲಿದ್ದಾರೆ ಎಂದು ತಿಳಿದು ಬಂದಿದೆ. ಈ ರೀತಿಯ ಬಂಧನ ಬಗ್ಗೆ ಜನತೆಯಲ್ಲಿ ಗೊಂದಲ ಏರ್ಪಟ್ಟಿದ್ದು ಒಂದೆಡೆ ಪ್ರತಿಭಟನೆ ಹಾಗೂ ಇನ್ನೊಂದೆಡೆ ಪೋಲೀಸರ ಕಾರ್ಯಾಚರಣೆ ಮುಂದುವರಿದಿದೆ.