Home Local ಅಕ್ರಮ ಸಾಗಣೆ ಮಾಡುತ್ತಿದ್ದ ಗೋವಾ ಮದ್ಯ ವಶಕ್ಕೆ

ಅಕ್ರಮ ಸಾಗಣೆ ಮಾಡುತ್ತಿದ್ದ ಗೋವಾ ಮದ್ಯ ವಶಕ್ಕೆ

SHARE

ಕಾರವಾರ: ಅಕ್ರಮವಾಗಿ ಗೋವಾ ಮದ್ಯವನ್ನು ಸಾಗಣೆ ಮಾಡುತ್ತಿದ್ದ ನಾಲ್ವರು ಆರೋಪಿಗಳಲ್ಲಿ ಒಬ್ಬರನ್ನು ಬಂಧಿಸಿ, ₨ 28 ಸಾವಿರ ಮೌಲ್ಯದ ಗೋವಾ ಮದ್ಯ ಹಾಗೂ ಒಂದು ಬೈಕ್‌ ಅನ್ನು ಚಿತ್ತಾಕುಲ ಪೊಲೀಸರು ತಾಲ್ಲೂಕಿನ ಮುಡಗೇರಿಯಲ್ಲಿ ವಶಕ್ಕೆ ಪಡೆದಿದ್ದಾರೆ.

 
ಖಚಿತ ಮಾಹಿತಿ ಮೇರೆಗೆ ನಡೆದ ಈ ದಾಳಿಯಲ್ಲಿ ಆರೋಪಿ ಹೋಟೆಗಾಳಿಯ ಕೃಷ್ಣ ಗಜನ್ಕರ್ ಎಂಬುವವನನ್ನು ಬಂಧಿಸಲಾಗಿದೆ. ಇನ್ನುಳಿದ ಪ್ರಮೋದ ಪಡುವಳಕರ್, ಘಾಡಸಾಯಿ ಸತೀಶ್ ನಾಯ್ಕ, ವೈಂಗಿಣಿಯ ಮಧು ಗಾಂವಕರ್ ಎಂಬುವವರು ಪರಾರಿಯಾಗಿದ್ದಾರೆ ಎಂದು ಚಿತ್ತಾಕುಲ ಠಾಣೆಯ ಪೊಲೀಸರು ಮಾಹಿತಿ ನೀಡಿದರು.