Home Important ಸಿದ್ದರಾಮಯ್ಯ ಸರಕಾರದಿಂದ ಆಗಿರುವಷ್ಟು ಅಭಿವೃದ್ಧಿ ಮತ್ತೆ ಯಾರಿಂದಲೂ ಆಗಿಲ್ಲ: ದೇಶಪಾಂಡೆ

ಸಿದ್ದರಾಮಯ್ಯ ಸರಕಾರದಿಂದ ಆಗಿರುವಷ್ಟು ಅಭಿವೃದ್ಧಿ ಮತ್ತೆ ಯಾರಿಂದಲೂ ಆಗಿಲ್ಲ: ದೇಶಪಾಂಡೆ

SHARE
ಕುಮಟಾ: ಸಿದ್ದರಾಮಯ್ಯ ಸರಕಾರದಲ್ಲಿ ಅಭಿವೃದ್ದಿಗೆ ಬಂದಿರುವತಂಹ ಹಣ ಯಾವುದೆ ಸರಕಾರ ಇರುವಾಗಲು ಬಂದಿರಲಿಲ್ಲ. ಈ ಮಾತನ್ನು ಎಲ್ಲಾರು ಒಪ್ಪಿಕೊಳ್ಳಬೇಕು ಜೊತೆಗೆ ವಿರೋಧ ಪಕ್ಷದವರು ಒಪ್ಪಿಕೊಳ್ಳಬೇಕು, ಅಭಿವೃದ್ದಿ ವಿಷಯದಲ್ಲಿ ಬಿನ್ನಭಿಪ್ರಾಯ ಇರಬಾರದು. ನಮ್ಮ ಸರಕಾರ ದೇಶದಲ್ಲಿ ಯಾವ ಸರಕಾರವು ಮಾಡದ  ಬಡವರಿಗೆ ಅನ್ನ ನೀಡುವ ಯೋಜನೆ  ಅನ್ನಭಾಗ್ಯ ಯೋಜನೆಯನ್ನು ನಮ್ಮ ಸರಕಾರ ಮಾಡಿದೆ. ನಮ್ಮ ರಾಜ್ಯದಲ್ಲಿ ಈ ಯೋಜನೆಯನ್ನು ನಾಲ್ಕೂ ಕೋಟಿ ಜನರು ಪಡೆದುಕೊಳ್ಳುತಿದ್ದಾರೆ. ಹೀಗೆ ಅನೇಕ ಕ್ಷೇತ್ರದಲ್ಲಿ ಹಲವು ಭಾಗ್ಯಗಳನ್ನು ನೀಡಿದ್ದೆವೆ. ಮುಂದಿನ 2025ರಷ್ಟಕ್ಕೆ ನಮ್ಮ ದೇಶ ಸಂಪೂರ್ಣ ಯುವಕರ ದೇಶವಾಗುತ್ತೆ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಆರ್,ವಿ,ದೇಶಪಾಂಡೆ ಹೇಳಿದ್ರು. ಅವರು ಉತ್ತರ ಕನ್ನಡ ಜಿಲ್ಲೆಯ ಕುಮಟಾ ಪಟ್ಟಣದ ಎಸ್.ಎಫ್,ಸಿ, ಐ.ಡಿ.ಎಸ್.ಎಂ.ಟಿ ಹಾಗೂ ಇತರ ಯೋಜನೆಯಲ್ಲಿ ಒಟ್ಟು 81.46 ಲಕ್ಷ ರೂಗಳ ವೆಚ್ಚದಲ್ಲಿ ನೂತನವಾಗಿ ನಿರ್ಮಸಿರುವ ಪುರಭವನ ಉದ್ಘಾಟನ ನೆರವೆರಿಸಿ ಮಾತನಾಡಿದ್ರು.
   ಈ ಕಾರ್ಯಕ್ರಮದ ವೇದಿಕೆಯಲ್ಲಿ ಕುಮಟಾ ಹೊನ್ನಾವರ ಕ್ಷೇತ್ರದ ಶಾಸಕರು ಮತ್ತು ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ. ಪುರಸಭಾ ಅಧ್ಯಕ್ಷ ಸಂತೋಷ ನಾಯ್ಕ,ಸಹಾಯಕ ಆಯುಕ್ತ ರಮೇಶ ಕಳಸದ್. ಕಾರ್ಯ ನಿರ್ವಹಣಾ ಅಧಿಕಾರಿ ಮಹೇಶ ಕುರಿಯರವರ್, ತಹಸಿಲ್ದಾರ್ ಮೇಘರಾಜ ನಾಯ್ಕ,ಮುಖ್ಯಾಧಿಕಾರಿ ಸುರೇಶ ಎಂ.ಕೆ. ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಜಯಶ್ರೀ ಮೋಗೆರ್,ಹೊನ್ನಾವರ ನಗರಸಭೆ ಅಧ್ಯಕ್ಷರಾದ ಜೈನಾಭಿ ಸಾಭ್ ಸೇರಿದಂತೆ ಕುಮಟಾ ಪುರಸಭಾ ಸದಸ್ಯರು, ಉಪಸ್ಥಿತರಿದ್ದರು.