Home Local ಮೃತ ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿದ ದೇಶಪಾಂಡೆ.

ಮೃತ ರಾಮಚಂದ್ರ ನಾಯ್ಕ ಮನೆಗೆ ಭೇಟಿ ನೀಡಿದ ದೇಶಪಾಂಡೆ.

SHARE
?????????????????????????????????????????????????????????

ಭಟ್ಕಳ: ಪುರಸಭೆ ಅಂಗಡಿಕಾರ ಮೃತ ರಾಮಚಂದ್ರ ನಾಯ್ಕ ಮನೆಗೆ ರವಿವಾರ ಸಂಜೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ತೆರಳಿ ಅವರ ಕುಟುಂಬದ ಸದಸ್ಯರಿಗೆ ಸಾಂತ್ವನವನ್ನು ತಿಳಿಸಿದರು.
ಬಳಿಕ ಮನೆಯಿಂದ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಬಿಜೆಪಿಯ ಪ್ರತಿಭಟನೆಯ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ್ ಸಚಿವ ಆರ್.ವಿ.ದೇಶಪಾಂಡೆ “ಜನರನ್ನು ಅನಾವಶ್ಯಕವಾಗಿ ಪ್ರಚೋದಿಸುವುದರಿಂದ ಅವರ ಯಾವುದೇ ಸಮಸ್ಯೆಗಳಿಗೆ ಪರಿಹಾರ ಸಿಗಲು ಸಾಧ್ಯವಿಲ್ಲ. ನಾವು ಶಾಂತಿ, ಸೌಹಾರ್ದತೆಯನ್ನು ಬಯಸುತ್ತಿದ್ದೇವೆ. ಎಲ್ಲ ಕೆಲಸವನ್ನೂ ಕಾನೂನು ಚೌಕಟ್ಟಿನಲ್ಲಿಯೇ ಕೈಗೊಳ್ಳಬೇಕಾಗಿದೆ. ನಮ್ಮ ಕೈಲಾದ ಸಹಾಯವನ್ನು ಮೃತ ಕುಟುಂಬಕ್ಕೆ ಮಾಡಿದ್ದೇವೆ. ಸರಕಾರದಿಂದ ನೀಡಲಾಗುವ ಪರಿಹಾರದ ಬಗ್ಗೆ ಈಗಲೇ ಪ್ರತಿಕ್ರಿಯೆ ನೀಡುವುದು ಸಾಧ್ಯವಿಲ್ಲ. ಸರಕಾರದ ಮಟ್ಟದಲ್ಲಿ ಎಲ್ಲವೂ ಆಗಬೇಕಿರುವುದರಿಂದ ಮುಂದಿನ ದಿನಗಳಲ್ಲಿ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.
ನಂತರ ಪುರಸಭಾ ಕಚೇರಿಗೆ ಕಲ್ಲು ಎಸೆತ, ಇನ್ನಿತರ ಅಪರಾಧ ಕೃತ್ಯಗಳಿಗೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾದವರ ಮೇಲಿರುವ ಪ್ರಕರಣವನ್ನು ಕೈ ಬಿಡುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ವಿ.ದೇಶಪಾಂಡೆ “ಪೊಲೀಸರ ಕೆಲಸ ಕಾರ್ಯಗಳಲ್ಲಿ ನಾವು ತಲೆ ಹಾಕುವುದಿಲ್ಲ. ಮುಗ್ಧ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದರೆ ಅರ್ಧ ರಾತ್ರಿಯಾದರೂ ಸರಿಯೇ ಫೋನ್ ಕರೆ ಮಾಡಿದರೆ ಅಂತವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಆದರೆ ಯಾರಾದರೂ ಕಾನೂನು ಕೈಗೆತ್ತಿಕೊಂಡರೆ, ಅವರನ್ನು ರಕ್ಷಿಸಿ ಎಂದು ನಾನು ಪೊಲೀಸರಿಗೆ ಹೇಗೆ ಹೇಳಲಿ, ಇಂದು ಪೊಲೀಸರ ಮೇಲೆ, ನಾಳೆ ನನ್ನ ಮೇಲೆ ಕಲ್ಲು ಎಸೆದರೆ ಏನು ಮಾಡುವುದು ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ಅಂಗಡಿಕಾರರೊಂದಿಗೆ ಮಾತನಾಡಿದ ಸಚಿವರು, ನಮ್ಮ ಸರಕಾರ ಬಡವರ ಪರ ನಿಂತಿದೆ. ರೂಪಾಯಿ 10 ಸಾವಿರ ಭದ್ರತಾ ಠೇವಣಿಯನ್ನಿಟ್ಟುಕೊಂಡು ರೂಪಾಯಿ 1 ಲಕ್ಷಕ್ಕೆ ಬಾಡಿಗೆ ಏರಿಸಿ ಹರಾಜು ಕರೆಯಲು ಅಧಿಕಾರಿಗಳು ಅವಕಾಶ ನೀಡಿರುವುದು ತಪ್ಪು. ಅಂಗಡಿಕಾರರನ್ನು ತೆರವು ಮಾಡದಂತೆ ಶಾಸಕ ಮಂಕಾಳು ಹಲವಾರು ಬಾರಿ ನಮ್ಮ ಬಳಿ ಹೇಳಿಕೊಂಡಿದ್ದಾರೆ. ಕಾಯ್ದೆಯಲ್ಲಿ ಅವಕಾಶ ಇದ್ದರೆ ಎಲ್ಲವನ್ನೂ ಪರಿಗಣನೆಗೆ ತೆಗೆದುಕೊಂಡು ಮೂಲ ಅಂಗಡಿಕಾರರಿಗೆ ಅಂಗಡಿಯನ್ನು ನೀಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಇದೇ ಸಂಧರ್ಭದಲ್ಲಿ ಸಚಿವ ಆರ್.ವಿ. ದೇಶಪಾಂಡೆಯವರಿಂದ 1 ಲಕ್ಷ ಹಾಗೂ ದಾನಿಗಳಿಂದ 1 ಲಕ್ಷ ರೂಪಾಯಿ ಸಂಗ್ರಹಿಸಿ ಒಟ್ಟು 2 ಲಕ್ಷ ರೂಪಾಯಿಗಳನ್ನು ಶಾಸಕ ಮಂಕಾಳ ವೈದ್ಯ ಹಾಗೂ ಉಸ್ತುವಾರಿ ಸಚಿವ ರಾಮಚಂದ್ರ ನಾಯ್ಕರ ಕುಟುಂಬಕ್ಕೆ ನೀಡಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ರಾಮಚಂದ್ರ ನಾಯ್ಕ ಬೆಂಕಿ ಹಚ್ಚಿಕೊಂಡು ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ಸಂದರ್ಭದಲ್ಲಿ ಶಾಸಕ ಮಂಕಾಳ ವೈದ್ಯ ತಾವೇ ಮಣಿಪಾಲ್ ಆಸ್ಪತ್ರೆಗೆ ಹೋಗಿ 50,000 ರೂಪಾಯಿ ನೀಡಿ ಬಂದಿದ್ದರು. ಹಾಗೂ ಆಸ್ಪತ್ರೆಗೆ ತಗಲುವ ವೆಚ್ಚವನ್ನು ಸರ್ಕಾರದಿಂದ ಒದಗಿಸಿಕೊಡುತ್ತೇನೆ ಎಂದು ಭರವಸೆ ನೀಡಿದ್ದರು. ಈಗ ಪುರಸಭೆ ಅಂಗಡಿಕಾರ ಮೃತ ರಾಮಚಂದ್ರ ನಾಯ್ಕರವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಆರೋಗ್ಯ ಸುಧಾರಣೆಗೆ ಹಾಗೂ ಆಸ್ಪತ್ರೆಗೆ ತಗಲುವ ಖರ್ಚನ್ನು ತಾವು ನೀಡುವುದಾಗಿ ಶಾಸಕ ಮಂಕಾಳ ವೈದ್ಯ ಭರಿಸುವುದಾಗಿ ಭರವಸೆ ನೀಡಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಮಂಕಾಳು ವೈದ್ಯ, ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಭಟ್ಕಳ ಸಹಾಯಕ ಆಯುಕ್ತ ಮಂಜುನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ್ ನಾಯ್ಕ, ಜಿಪಂ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ, ನಿಚ್ಚಲಮಕ್ಕಿ ಶ್ರೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಮ್.ಆರ್.ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.