Home Article ಮೊರೆ ..(ಪ್ರಭೂ , ಒಮ್ಮೆ ದಯಮಾಡು..)

ಮೊರೆ ..(ಪ್ರಭೂ , ಒಮ್ಮೆ ದಯಮಾಡು..)

SHARE

ನಿನ್ನ  ದಾರಿಯ ಬೆಳಗುವ ದೀವಟಿಗೆಯಲ್ಲ

ಮುಡಿಯೇರಿ ಚೆಲ್ಲುವ ರತ್ನಪ್ರಭೆಯಲ್ಲ

ಹಿತವೆನಿಸುವಂತೆ ಪೂಸಿದ ಸುಗಂಧವಲ್ಲ

ಕೊರಳನಪ್ಪಿದ ಹಾರದ ಚೆಲುವ ಹೂವಲ್ಲ

ದಾರಿಯ ಬದಿಯ ಅನಾಮಿಕ ತರು ನಾನು 

ನನ್ನ ದಾರಿಯಲ್ಲಿ ಸುಳಿದರೆ ನೀನು 

ಕಣ್ತುಂಬಿಕೊಳ್ಳುವೆ  ನಿನ್ನ ಬಿಂಬ 

ಪಥಶ್ರಾಂತನಾಗಿ  ಬಂದರೆ ನೆರಳಾಗುವೆ ,

 ಬೀಸುವೆ ಕೊಂಬೆ ಕೈಗಳ ಚಾಮರ

ನೀ ಸರಿದ ನಂತರ ತಳೆಯುವೆ ಪದರಜವ 

ತಲೆಯಲ್ಲಿ ಗಾಳಿ ಗೆಳೆಯನ ಬೇಡಿ 

ಪ್ರಭೂ , ಒಮ್ಮೆ ದಯಮಾಡು……

•ಗೋವಿಂದ ಹೆಗಡೆ