Home Local ಕುಮಟಾದಲ್ಲಿ ಅ೨ ಕ್ಕೆ ಗೋಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

ಕುಮಟಾದಲ್ಲಿ ಅ೨ ಕ್ಕೆ ಗೋಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ

SHARE

ಅಕ್ಟೊಬರ್‌ ೨ರಂದು ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದಿವ್ಯ ಆಶೀರ್ವಾದದೊಂದಿಗೆ ಉತ್ತರಕನ್ನಡ ಜಿಲ್ಲಾ ಗೋಪರಿವಾರದ ಮಾರ್ಗದರ್ಶನದಲ್ಲಿ ಕುಮಟಾ ತಾಲೂಕಾ ಗೋಪರಿವಾರ ಮತ್ತು ಎಲ್ಲಾ ಗ್ರಾಮಗೋಪರಿವಾರಗಳ ನೇತ್ರತ್ವದಲ್ಲಿ ಬ್ರಹತ್ ಗೋಸಂಜೀವಿನಿ ಜೋಳಿಗೆ ಅಭಿಯಾನ ಮತ್ತು ಅಭಯಾಕ್ಷರ ಸಂಗ್ರಹ ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಈ ಅಭಿಯಾನದ ಪ್ರಯುಕ್ತ ಅಂದು ಬೆಳಿಗ್ಗೆ 9:30ಕ್ಕೆ ಭೂದೇವಿ ಅಮ್ಮನವರ ದೇವಾಲಯದಿಂದ ಬ್ರಹತ್ ಮೆರವಣಿಗೆ ಹೊರಟು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದ್ದು ಹಲವು ಸಂಘಟನೆಗಳ ಪ್ರಮುಖರು,ಗಣ್ಯರು,ಗೋಪ್ರೇಮಿಗಳು ಪಾಲ್ಗೊಳ್ಳಲಿದ್ದಾರೆ.

ಎಲ್ಲಾ ಮಂಡಲಗಳ ಕಾರ್ಯಕರ್ತರು, ಶ್ರೀಮಠದ ಸದ್ಭಕ್ತರು, ಸಂಘಟನೆಗಳ ಪ್ರಮುಖರು,ಕಾರ್ಯಕರ್ತರು ಗೋಸಂಜೀವಿನಿಯಿಂದ ಗೋವಿನ ಪ್ರಾಣ ಉಳಿಸುವ ಶ್ರೀಗಳ ಸಂಕಲ್ಪದ ಈ ಮಹತ್ತರ ಉದ್ದೇಶವನ್ನು ಸಾಕಾರಗೊಳಿಸಲು ಕಿಂಚಿತ್ ಸೇವೆ ಸಲ್ಲಿಸಲು ನಡೆಯುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಲು ವಿನಂನಂತಿಸಿದ್ದಾರೆ.

ಸಂಪರ್ಕಕ್ಕಾಗಿ : ಸುಬ್ರಾಯ ಭಟ್ಟ 9448611217

ಕಿಷನ್ ವಾಳ್ಕೆ: 9880363130