Home Local ನಿನಾದ ಕಾವ್ಯ ರಚನಾ ಸ್ಪರ್ಧೆ ಅಶ್ವಿನಿ ಕೋಡಿಬೈಲ್, ಸಾವಿತ್ರಿ ನಾಯಕ ಮತ್ತು ಶೋಭಾ ಹಿರೆಕೈಗೆ ಪ್ರಶಸ್ತಿ

ನಿನಾದ ಕಾವ್ಯ ರಚನಾ ಸ್ಪರ್ಧೆ ಅಶ್ವಿನಿ ಕೋಡಿಬೈಲ್, ಸಾವಿತ್ರಿ ನಾಯಕ ಮತ್ತು ಶೋಭಾ ಹಿರೆಕೈಗೆ ಪ್ರಶಸ್ತಿ

SHARE

ಭಟ್ಕಳ: ಇಲ್ಲಿಯ ‘ನಿನಾದ ಸಾಹಿತ್ಯ ಸಂಗೀತ ಸಂಚಯ’ ಸಂಘಟನೆಯ ದಸರಾ ಕಾವ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಸ್ವರಚಿತ ಕವನ ಸ್ಪರ್ಧೆಯ ಪಲಿತಾಂಶದ ವಿವರ ಈ ಮುಂದಿನಂತಿದೆ.

ಮೊದಲ ಬಹುಮಾನ ಅಶ್ವಿನಿ ಕೋಡಿಬೈಲ್, ದ್ವಿತೀಯ ಬಹುಮಾನ ಸಾವಿತ್ರಿಯ ನಾಯಕ ಕುಮಟಾ, ತೃತೀಯ ಬಹುಮಾನ ಶೋಭಾ ಹೀರೆಕೈ ಸಿದ್ದಾಪುರ ಇವರಿಗೆ ಲಬಿಸಿದೆ. ಶಾರದಾ ಭಟ್ ಕೂಜಳ್ಳಿ, ವಿನಯ್ ವಾಜಂತ್ರಿ ಭಟ್ಕಳ, ಪ್ರೇಮಾ ಟಿ.ಎಮ್.ಆರ್ ಇವರುಗಳ ಕವನಗಳಿಗೆ ತೀರ್ಪುಗಾರರ ಮೆಚ್ಚುಗೆ ಬಹುಮಾನ ಬಂದಿದೆ.
ಬಹುಮಾನವು ಕ್ರಮವಾಗಿ ರೂ.1500 , ರೂ1000 , ರೂ500 ಹಾಗೂ ಬಹುಮಾನ ಫಲಕ, ಪ್ರಶಸ್ತಿ ಪತ್ರ ಒಳಗೊಂಡಿರುತ್ತದೆ. ತೀರ್ಪುಗಾರರ ಮೆಚ್ಚುಗೆ ಪಡೆದ ಕವನಗಳಿಗೆ ಪುಸ್ತಕ ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಲಾಗುವುದು. ನಾಡಿನ ಹೆಸರಾಂತ ಲೇಖಕ ನಿರ್ದೇಶಕ ಈಚನೂರು ಇಸ್ಮಾಯಿಲ್ ತುಮಕೂರು ಮತ್ತು ಹಿರಿಯ ಕವಿ ಮಾಸ್ಕೇರಿ ಎಂ.ಕೆ.ನಾಯಕ ಇವರು ಕವನ ಸ್ಪರ್ಧೆಯ ನಿರ್ಣಯವನ್ನು ನೀಡಿದ್ದು, ಕವನ ಸ್ಪರ್ಧೆಯ ವಿಜೇತರಿಗೆ ಅ. 8 ರಂದು ಶಿರಾಲಿಯಲ್ಲಿ ನಡೆಯುವ ನಿನಾದ ದಸರಾ ಕಾವ್ಯೋತ್ಸವದಲ್ಲಿ ಬಹುಮಾನ ನೀಡಲಾಗುವುದು ಎಂದು ನಿನಾದ ಸಂಘಟನೆಯ ಸಂಚಾಲಕಿ ರೇಷ್ಮಾ ಉಮೇಶ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.