Home Local ಹೊನ್ನಾವರದಲ್ಲಿ ಶುಭಾರಂಭಗೊಂಡ “S.S. Fashion”

ಹೊನ್ನಾವರದಲ್ಲಿ ಶುಭಾರಂಭಗೊಂಡ “S.S. Fashion”

SHARE

ಹೊನ್ನಾವರ :ಕಣ್ವಾ ಮಾರ್ಟನ ಸಹಯೋಗದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ ಹಾಗೂ ಶ್ರೀಮತಿ ಶ್ರೀಕಲಾ ಶಾಸ್ತ್ರಿ ಮತ್ತು ನಾಗರಾಜ ಯಾಜಿ ಮಾಲಿಕತ್ವದಲ್ಲಿ ಹೊನ್ನಾವರದಲ್ಲಿ S.S Fashion ಮಳಿಗೆ ಶುಭಾರಂಭಗೊಂಡಿದೆ.

ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಕರಕಮಲಗಳಿಂದ ಇಂದು ಮಳಿಗೆ ಶುಭಾರಂಭಗೊಂಡಿತು.ಶ್ರೀಗಳು ದೀಪ ಬೆಳಗಿಸಿ ಆಶೀರ್ವಾದಿಸಿ ಮಳಿಗೆಯನ್ನು ವಿದ್ಯುಕ್ತವಾಗಿ ಉದ್ಘಾಟನೆ ಮಾಡಿದರು. ಮಾಲಿಕರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು.

ಇದೇ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಶಾಸ್ತ್ರಿ, ವೇದಮೂರ್ತಿ ಸುಬ್ರಹ್ಮಣ್ಯ ವಿ. ಭಟ್ಟ ಇದ್ದರು.

ಕಾರ್ಯಕ್ರಮದಲ್ಲಿ ಬೆಳಕು ಸಂಸ್ಥೆಯ ಅಧ್ಯಕ್ಷರಾದ ನಾಗರಾಜ ನಾಯಕ, ಮಾಜಿ ಶಾಸಕ ದಿನಕರ ಶೆಟ್ಟಿ, ಜಿ.ಪಂ ಸದಸ್ಯ ಪ್ರದೀಪ ನಾಯಕ ಹಾಜರಿದ್ದರು.

ಇಂದಿನಿಂದ ಅತ್ಯುತ್ತಮ ಗುಣಮಟ್ಟದ ಎಲ್ಲಾ ವಿಧದ ವಸ್ತ್ರಗಳೂ ಜನತೆಗೆ ಲಭ್ಯವಾಗಲಿದೆ.