Home Local ಯಲ್ಲಾಪುರದಲ್ಲಿ ಭರ್ಜರಿ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಸೀಸಂ ಕಟ್ಟಿಗೆ ವಶ

ಯಲ್ಲಾಪುರದಲ್ಲಿ ಭರ್ಜರಿ ಕಾರ್ಯಾಚರಣೆ : ಲಕ್ಷಾಂತರ ಮೌಲ್ಯದ ಸೀಸಂ ಕಟ್ಟಿಗೆ ವಶ

SHARE

ಯಲ್ಲಾಪುರ: ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ವಲಯಾರಣ್ಯಾಧಿಕಾರಿಗಳು ಪಟ್ಟಣದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ ಅಕ್ರಮ ಸಿಸಂ ಕಟ್ಟಿಗೆಯನ್ನು ಆರೋಪಿ ಸಮೇತ ವಶಪಡಿಸಿಕೊಂಡ ಘಟನೆ ಪಟ್ಟಣದ ಕಾಳಮ್ಮನಗರದಲ್ಲಿ ನಡೆದಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಪಟ್ಟಣದ ಕಾಳಮ್ಮನಗರ ನಿವಾಸಿಯಾದ ನಾರಾಯಣ ಬಡಿಗೇರ ಹಾಗೂ ಹಸನ್ ಭಾಷಾ ಸಾಬ್ ಮನೆಯಲ್ಲಿ ಅಕ್ರಮವಾಗಿ ಕಟ್ಟಿಗೆಯನ್ನು ಇಟ್ಟುಕೊಂಡ ಆರೋಪಿಗಳಾಗಿದ್ದಾರೆ.

ಅರಣ್ಯ ಪ್ರದೇಶದಿಂದ ೦.೦೬೦ ಕ್ಯೂಬಿಕ್ ಮೀಟರ್ ಸಿಂಸಂ ಕಟ್ಟಿಗೆಯನ್ನು ಅಕ್ರಮವಾಗಿ ಪಟ್ಟಣದ ಕಟ್ಟಿಗೆ ಇಂಡಸ್ಟ್ರೀಸ್ ಗೆ ತಂದು ಮಾರಾಟ ಮಾಡುತ್ತಿದ್ದಾಗ ವಲಯ ಅರಣ್ಯಾಧಿಕಾರಿ ಶ್ರೀನಿವಾಸ ನಾಯ್ಕ ನೇತೃತ್ವದ ತಂಡ ದಾಳಿ ನಡೆಸಿ ಆರೋಪಿ ಸಮೇತ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯಾಧಿಕಾರಿಗಳಾದ ಸಿ.ಎಸ್.ನಾಯ್ಕ ಬಸವರಾಜ, ಜಿ.ಡಿ.ನಾಯ್ಕ, ಅರಣ್ಯ ರಕ್ಷಕರಾದ ನಾಗರಾಜ ಕಲಗುಟಕನವರ್ , ಶರಣಬಸು ದೇವರ, ಸುನೀಲ್ , ಜಂಗಮ ಶೆಟ್ಟಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.