Home Important ಅಳಿಯನ ಕಛೇರಿ ಮೇಲೆ ಐಟಿ ದಾಳಿ :ಎಸ್ ಎಂ ಕೃಷ್ಣ ಹೇಳಿದ್ದೇನು?

ಅಳಿಯನ ಕಛೇರಿ ಮೇಲೆ ಐಟಿ ದಾಳಿ :ಎಸ್ ಎಂ ಕೃಷ್ಣ ಹೇಳಿದ್ದೇನು?

SHARE

ಬೆಂಗಳೂರು: ತಮ್ಮ ಅಳಿಯ ಸಿದ್ಧಾರ್ಥ ಅವರ ಹಲವು ಕಚೇರಿಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿ ಕುರಿತು ಪ್ರತಿಕ್ರಿಯೆ ನೀಡಲು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ನಿರಾಕರಿಸಿದ್ದಾರೆ. ಐಟಿ ದಾಳಿಯಾದ ನಂತರ ಇದೇ ಮೊದಲ ಬಾರಿಗೆ ಮಾಧ್ಯಮದವರೊಂದಿಗೆ ಮುಖಾಮುಖಿಯಾದ ಕೃಷ್ಣ, ಪತ್ರಕರ್ತರು ಪದೇ ಪದೇ ಈ ಪ್ರಶ್ನೆ ಕೇಳಿದಾಗಲೂ ಯಾವುದೇ ಪ್ರತಿಕ್ರಿಯೆ ನೀಡದೆ ಮುಂದೆ ನಡೆದಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿದ್ದ ತಮ್ಮ ಭಾವ ಚಿತ್ರವನ್ನು ತೆಗೆದುಹಾಕಿದ ಘಟನೆ ಕುರಿತಂತೆಯೂ ಪತ್ರಕರ್ತರು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಕೃಷ್ಣ, ಆ ಬಗ್ಗೆ ನನಗೇನೂ ಗೊತ್ತಿಲ್ಲ, ಆ ಸಂದರ್ಭದಲ್ಲಿ ನಾನು ಅಮೆರಿಕಾದಲ್ಲಿದ್ದೆ ಎಂದು ಉತ್ತರಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೆ, ಸಿದ್ಧಾರ್ಥ ಅವರ ಕಾಫಿ ಡೇ ಕಚೇರಿಗಳ ಮೇಲೆ ಐಟಿ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಲೆಕ್ಕಕ್ಕಿಲ್ಲದ ದೊಡ್ಡ ಮೊತ್ತ ಪತ್ತೆಯಾಗಿತ್ತು ಎಂದು ಹೇಳಲಾಗಿತ್ತು.ಆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರಿಂದ ವಿವಿಧ ರೀತಿಯ ಪ್ರತಿಕ್ರಿಯೆ ವ್ಯಕ್ತವಾಗಿತ್ತು.