Home Important ಶ್ರೀ ಸಂಸ್ಥಾನದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನಂತಕುಮಾರ್ ಹೆಗಡೆ.

ಶ್ರೀ ಸಂಸ್ಥಾನದವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದ ಅನಂತಕುಮಾರ್ ಹೆಗಡೆ.

SHARE

ಹೊನ್ನಾವರ : ಕೆಕ್ಕಾರಿನ ಶ್ರೀ ರಘೂತ್ತಮ ಮಠದಲ್ಲಿ ನಡೆಯುತ್ತಿರುವ ಶರನ್ನವರಾತ್ರಿ ಕಾರ್ಯಕ್ರಮದ ಕೊನೆಯ ದಿನ ನೂತನ ಸಚಿವರು ಮತ್ತು ಕೌಶಲ್ಯ ಅಭಿವೃದ್ಧಿ ಸಚಿವರಾದ ಶ್ರೀ ಅನಂತ್ ಕುಮಾರ್ ಹೆಗಡೆ ಅವರು ಶ್ರೀ ಸಂಸ್ಥಾನವನ್ನು ಭೇಟಿ ಮಾಡಿದರು .

ಶ್ರೀರಾಮಚಂದ್ರಾಪುರ ಮಠದ ಪಾರಂಪರಿಕ ಶಿಷ್ಯರಾದ ಶ್ರೀ ಅನಂತ್ ಕುಮಾರ್ ಹೆಗಡೆ ಅವರು ನೂತನ ಸಚಿವರಾಗಿ ಆಯ್ಕೆಯಾದ ಮೇಲೆ ಇದೇ ಪ್ರಥಮ ಬಾರಿಗೆ ಶ್ರೀಮಠಕ್ಕೆ ಆಗಮಿಸಿದ್ದರು .

ಅನಂತ್ ಕುಮಾರ್ ಹೆಗಡೆ ಅವರು ಶ್ರೀಗಳಿಗೆ ಫಲ ಸಮರ್ಪಣೆ ಮಾಡಿದರು . ನಂತರ ದೇಶದ ಅಭಿವೃದ್ಧಿಯ ಕುರಿತಾದ ಕೆಲವು ನುಡಿಗಳನ್ನು ಶ್ರೀಗಳ ಜೊತೆಗೆ ಹಂಚಿಕೊಂಡರು ಎನ್ನಲಾಗಿದೆ.

ಶ್ರೀಗಳು ಅನಂತ್ ಕುಮಾರ್ ಹೆಗಡೆ ಅವರಿಗೆ ಶಾಲು ಹೊದಿಸಿ ಮಂತ್ರಾಕ್ಷತೆ ನೀಡಿ ಅವರನ್ನು ಆಶೀರ್ವದಿಸಿದರು .

ಇವರ ಜೊತೆಗೆ ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಸೂರಜ್ ನಾಯ್ಕ ಸೋನಿ, ಡಾ. ಜಿ.ಜಿ ಹೆಗಡೆ, ಸುನಿಲ್ ನಾಯ್ಕ, ವೆಂಕಟರಮಣ ಹೆಗಡೆ ಇನ್ನಿತರರು ಹಾಜರಿದ್ದರು .