Home Local ಕಿಡಿಗೇಡಿಗಳ ಅವಾಂತರ ಬೆಂಕಿಗೆ ಆಹುತಿಯಾದ ಬೈಕ್ ಗಳು.

ಕಿಡಿಗೇಡಿಗಳ ಅವಾಂತರ ಬೆಂಕಿಗೆ ಆಹುತಿಯಾದ ಬೈಕ್ ಗಳು.

SHARE

ಕಾರವಾರ: ತಾಲೂಕಿನ ಎಂಜಿ ರಸ್ತೆಯಲ್ಲಿರುವ ಭೂ ಮಾಪನ ಇಲಾಖೆಯ ಶೆಡ್ಡಿನಲ್ಲಿ ನಿಲ್ಲಿಸಿಟ್ಟಿದ್ದ ಸುಮಾರು ೯ ಬೈಕ್ ಗಳು ಬೆಂಕಿಗಾಹುತಿಯಾಗಿದೆ.ಯಾರೋ ಕಿಡಿಗೇಡಿಗಳು ಶನಿವಾರ ತಡರಾತ್ರಿ ಬೆಂಕಿ ಹೆಚ್ಚಿದ್ದಾರೆ ಎಂದು ವರದಿ ಬಂದಿದೆ.

ಇಲ್ಲಿಂದ ವಿವಿಧೆಡೆ ಕೆಲಸಕ್ಕೆ ತೆರಳುವ ಸ್ಥಳೀಯರು ಇದೇ ಶೆಡ್ ನಲ್ಲಿ ಪ್ರತಿದಿನ ಬೈಕ್ ಇಟ್ಟು ತೆರಳುತ್ತಿದ್ದರು. ಆಗ ಕೆಲವರು ಬಂದು ಅವರ ಬೈಕುಗಳಿಂದ ಪೆಟ್ರೋಲ್ ಅನ್ನು ಕದಿಯುತ್ತಿದ್ದರು. ಆದರೆ ನಿನ್ನೆ ತಡರಾತ್ರಿ ಕಿಡಿಗೇಡಿಗಳು ಈ ರೀತಿ ಮಾಡಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದರು.
ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ತನಿಖೆಯ ನಂತರ ಸತ್ಯ ಹೊರ ಬರಲಿದೆ.