Home Local ಯಕ್ಷ ಬ್ರಹ್ಮನ ಪಾರ್ಥಿವ ಶರೀರ ಕಂಡು ಭಾವುಕರಾದ ಗಣ್ಯರು.

ಯಕ್ಷ ಬ್ರಹ್ಮನ ಪಾರ್ಥಿವ ಶರೀರ ಕಂಡು ಭಾವುಕರಾದ ಗಣ್ಯರು.

SHARE

ಹೊನ್ನಾವರ :ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಪಾರ್ಥಿವ ಶರೀರವನ್ನು ಹೊನ್ನಾವರದ ಪೋಲಿಸ್ ಗ್ರೌಂಡ್ ನಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು ಹೆಚ್ಚಿನ ಸಂಖ್ಯೆಯಲ್ಲಿ ಅವರ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ. ಕುಮಟಾ ಹೊನ್ನಾವರ ಕ್ಷೇತ್ರದ ಬಿಜೆಪಿ ಮುಖಂಡ ನಾಗರಾಜ ನಾಯಕ ತೊರ್ಕೆ ಯವರೂ ಕೂಡ ಅಂತಿಮ ದರ್ಶನ ಪಡೆಯುವ ಸಂದರ್ಭದಲ್ಲಿ ಭಾವುಕರಾಗಿ ತಮ್ಮ ನಮನ ಸಲ್ಲಿಸಿದರು.

ಇನ್ನೊಬ್ಬ ಯಕ್ಷಪ್ರೇಮಿ ಹಾಗೂ ಚಿಟ್ಟಾಣಿಯವರ ಅಭಿಮಾನಿ ದಿನಕರ ಶೆಟ್ಟಿ ಅಂತಿಮ ನಮನ ಸಲ್ಲಿಸಿ ಭಾವುಕರಾದರು.

ಈ ಸಂದರ್ಭದಲ್ಲಿ ಇನ್ನೋರ್ವ ಬಿಜೆಪಿ ಮುಖಂಡ ಸೂರಜ ನಾಯ್ಕ ಸೋನಿ, ಪತ್ರಕರ್ತ ಜೀ ಯು ಭಟ್ಟ ,ಎಂ ಆರ್ ನಾಯ್ಕ, ಜಿ.ಎಲ್ ಹೆಗಡೆ, ಜಯದೇವ ಬಳಗಂಡಿ ಹಾಗೂ ಇನ್ನಿತರ ಗಣ್ಯರು ಅಂತಿಮ ನಮನ ಸಲ್ಲಿಸಿದರು.