Home Local ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬಸವರಾಜ ಸ್ವಾಮಿಗಳು.

ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಬಸವರಾಜ ಸ್ವಾಮಿಗಳು.

SHARE

ಗೋಕರ್ಣ :ಪ ಪೂ ಶ್ರೀ ಶ್ರೀ ಬಸವರಾಜ ಸ್ವಾಮಿಗಳು , ಗುರುಹಿರೇಮಠ ಯಾದಗಿರಿ ಇವರು ಶ್ರೀ ಕ್ಷೇತ್ರ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದಲ್ಲಿ ಜರುಗುತ್ತಿರುವ “ಗೋಕರ್ಣ ಗೌರವ” ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಆತ್ಮಲಿಂಗ ಪೂಜೆ ನೆರವೇರಿಸಿದರು .

ಗೋವಾದ ಖ್ಯಾತ ಜ್ಯೋತಿಷಿ ಶ್ರೀ ವಾಸುದೇವ ಪ್ರಭು ಇವರು ದೇವಾಲಯದ ಪರವಾಗಿ ಫಲ ಸಮರ್ಪಿಸಿ , ಶಾಲು ಹೊದೆಸಿ, ತಾಮ್ರಪತ್ರ ಸ್ಮರಣಿಕೆ ನೀಡಿ, ಗೌರವ ಸಲ್ಲಿಸಿದರು.

ಆಡಳಿತಾಧಿಕಾರಿ ಶ್ರೀ ಜಿ ಕೆ ಹೆಗಡೆ , ಉಪಾಧಿವಂತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು . ವೇ ವಿಶ್ವನಾಥ ಭಟ್ ಇವರು ಪೂಜಾ ಕೈಂಕರ್ಯ ನೆರವೇರಿಸಿದರು .