Home Local ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಆನೆ: ಮುಂಡಗೋಡಿನಲ್ಲಿ ಘಟನೆ

ಕೆರೆಯಲ್ಲಿ ಬಿದ್ದು ಸಾವನ್ನಪ್ಪಿದ ಆನೆ: ಮುಂಡಗೋಡಿನಲ್ಲಿ ಘಟನೆ

SHARE

ಮುಂಡಗೋಡ: ಕೆರೆಯಲ್ಲಿ ಮುಳುಗಿ ಆನೆ ಮರಿಯೊಂದು ಸಾವನ್ನಪದಪಿರುವ ಘಟನೆ ತಾಲೂಕಿನ ಗುಂಜಾವತಿ‌‌ ಮುರುಕನಕಟ್ಟೆ ಕೆರೆಯಲ್ಲಿ ನಡೆದಿದೆ.

ಕಾಡಿನಿಂದ ನಾಡಿಗೆ ಬಂದ ಆನೆ ಗದ್ದೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ. ಕೆರೆಯಲ್ಲಿ ನೀರು ತುಂಬಿ‌ ನೆಲಸಮದವಾಗಿರೋದರಿಂದ ಆನೆ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದೆ.

ಸಾವನ್ನಪ್ಪಿರುವ ಆನೆ‌ ಮರಿ ಮೂರುವರ್ಷದಾಗಿದೆ ಎಂದು ಹೇಳಲಾಗುತ್ತಿದೆ. ಕಳೆದ ಎರಡು ದಿನದ‌ಹಿಂದೆಯೇ ಸಾವನಪ್ಪಿರಬಹುದು ಎಂದು ಶಂಕಿಸಲಾಗಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಬೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.