Home Local ಅಗಲಿದ ಯಕ್ಷಲೋಕ ಕಣ್ಮಣಿಗೆ ದಾಂಡೇಲಿಯಲ್ಲಿ ಶೃದ್ಧಾಂಜಲಿ

ಅಗಲಿದ ಯಕ್ಷಲೋಕ ಕಣ್ಮಣಿಗೆ ದಾಂಡೇಲಿಯಲ್ಲಿ ಶೃದ್ಧಾಂಜಲಿ

SHARE

ದಾಂಡೇಲಿ: ಅಗಲಿದ ಯಕ್ಷಗಾನದ ಮೇರುನಟ ಪದ್ಮಶ್ರೀ ಪ್ರಶಸ್ತಿ ಪುರಸ್ಕøತ ಕಲಾವಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ಶೃದ್ದಾಂಜಲಿ ಅರ್ಪಿಸುವ ನುಡಿ ನಮನ ಕಾರ್ಯಕ್ರಮ ನಗರದ ಕಲಾಶ್ರೀ ಹಾಗೂ ಒಡನಾಡಿ ಸಂಸ್ಥೆಯ ಆಶ್ರಯದಲ್ಲಿ ಹೊಟೆಲ್ ಸಂತೋಷ್ ಸಭಾಭವನದಲ್ಲಿ ನಡೆಯಿತು.

ಚಿಟ್ಟಾಣಿಯವರ ಆತ್ಮಕ್ಕೆ ಶಾಂತಿಕೋರಿ ಮೌನ ಆಚರಿಸಿ, ಅವರ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ನಂತರ ಮಾತನಾಡಿದ ಬಂಗೂರನಗರ ಪದವಿ ಕಾಲೇಜಿನ ಹಿರಿಯ ಉಪನ್ಯಾಸಕ, ಲೇಖಕ ಡಾ. ಆರ್.ಜಿ. ಹೆಗಡೆ ಯಕ್ಷಗಾನಕ್ಕೊಬ್ಬನೇ ಚಿಟ್ಟಾಣಿ ಎಂದರೆ ತಪ್ಪಾಗಲಾರದು. ಚಿಟ್ಟ್ಠಾಣಿಯವರು ಯಕ್ಷಗಾನದ ತಮ್ಮ ಪ್ರತಿಯೊಂದು ಪಾತ್ರಗಳ ಮೂಲಕ ಬದುಕಿನ ಮೌಲ್ಯಗಳನ್ನು ಹೇಳಿಕೊಟ್ಟವರು ಎಂದರು. ಕಲಾಶ್ರೀ ಸಂಸ್ಥೆಯ ಅಧ್ಯಕ್ಷ ಹಾಗೂ ಉದ್ಯಮಿ ಎಸ್. ಪ್ರಕಾಶ ಶೆಟ್ಟಿ ಮಾತನಾಡಿ ಚಿಟ್ಟಾಣಿಯವರು ಕೇವಲ ಯಕ್ಷಗಾನ ಪಾತ್ರದಾರಿಯಾಗಿರದೇ, ಅವರು ತಮ್ಮ ಬದುಕನ್ನೇ ಯಕ್ಷಗಾನವನ್ನಾಗಿಸಿಕೊಂಡಿದ್ದರು. ಯಕ್ಷಗಾನದಕ್ಕೊಂದು ವಿಶ್ವ ಮಾನ್ಯತೆಯನ್ನು ತಂದುಕೊಟ್ಟಿದ್ದರಲ್ಲದೇ, ಯಕ್ಷಗಾನಕ್ಕೆ ಜೀವನವನ್ನೆ ಮುಡಿಪಾಗಿಟ್ಟ ಯಕ್ಷಲೋಕದ ದ್ರುವನಕ್ಷತ್ರ ಚಿಟ್ಟಾಣಿಯವರಾಗಿದ್ದರು ಎಂದರು.

ಒಡನಾಡಿ ಸಂಸ್ಥೆ ಅದ್ಯಕ್ಷ ಬಿ.ಎನ್. ವಾಸರೆ ಮಾತನಾಡಿ ಈ ಯಕ್ಷಗಾನ ಕ್ಷೇತ್ರಕ್ಕೆ ಇದು ಚಿಟ್ಟಾಣಿಯವರ ಯುಗವಾಗಿತ್ತು. ಈ ಯುಗದಲ್ಲಿ ಅವರೇ ಯುಗ ಪುರುಷರಾಗಿದ್ದರು ಎಂದರೆ ತಪ್ಪಾಗಲಾರದು. ಪಾತ್ರಗಳ ಮೂಲಕ ಸಾಮಾಜಿಕ ಜಾಗೃತಿಯ ಸಂದೇಶ ನೀಡುತ್ತಿದ್ದ ಅವರು ಸಾವಿನಲ್ಲಿಯೂ ಕಣ್ಣುಗಳನ್ನು ದಾನ ಮಾಡಿ ಆದರ್ಶರಾದರು. ಅವರ ಬದುಕೇ ಯಕ್ಷಗಾನವಾಗಿತ್ತು ಎಂದರು. ಅದ್ಯಾಪಕ, ಯಕ್ಷಗಾನ ಕಲಾವಿದ ಜಿ.ಎಸ್. ಹೆಗಡೆಯವರು ಚಿಟ್ಟಾಣಿಯವರ ಜೊತೆಗೆ ತಾವು ತಾಳಮದ್ದಲೆ ಪಾತ್ರ ನಿರ್ವಹಿಸಿದ ಸಂದರ್ಭ ವಿವರಿಸಿ, ಅವರು ತಮ್ಮ ಜೊತೆಗಿನ ಸಹ ಕಲವಿದನ್ನು ಬೆಳೆಸುವಂತಹ ವ್ಯಕ್ತಿತ್ವದವರಾಗಿದ್ದರು ಎಂದರು. ಸಭೆಯ ಆದ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಚಾರ್ಯ ಪಿ.ವಿ. ಹೆಗಡೆ ಚಿಟ್ಟಾಣಿಯವರ ಕನಸನ್ನು ನನಸಾಗಿಸುವ ಜವಾಬ್ದಾರಿ ಸರಕಾರ ಹಾಗೂ ನಮ್ಮೆಲ್ಲರ ಮೇಲಿದೆ ಎಂದರು.

ಕಲಾಶ್ರೀ ಸಂಸ್ಥೆಯ ಉಪಾಧ್ಯಕ್ಷರುಗಳಾದ ಸುರೇಶ ಕಾಮತ್, ವಿಷ್ಣುಮೂರ್ತಿ ರಾವ್, ಕೊಂಕಣಿ ಅಕಾಡೆಮಿ ಆದ್ಯಕ್ಷ ಆರ್.ಪಿ. ನಾಯ್ಕ, ನಿವೃತ್ತ ಪ್ರಾಚಾರ್ಯ ಯು.ಎಸ್. ಪಾಟೀಲ, ಸಮಾಜ ಸೇವಕ ರಾಧಾಕೃಷ್ಣ ಹೆಗಡೆ, ಕಸಾಪ ಅಧ್ಯಕ್ಷ ಉಪೇಂದ್ರ ಘೋರ್ಪಡೆ, ಪ್ರಾಚಾರ್ಯ ಎನ್.ಆರ್. ನಾಯ್ಕ, ಉಪನ್ಯಾಸಕ ಹನ್ಮಂತ ಕುಂಬಾರ, ಕಲಾವಿದ ಸುದರ್ಶನ ಹೆಗಡೆ, ವಿಶ್ವನಾಥ ಭಾಗ್ವತ್ ಮುಂತಾದವರು ಮಾತನಾಡಿ ನುಡಿನಮನ ಸಲ್ಲಿಸಿದರು.

ಸಭೆಯಲ್ಲಿ ಕಲಾಶ್ರೀ ಸಂಸ್ಥೆಯ ಕಾರ್ಯದರ್ಶಿ ಕೀರ್ತಿ ಗಾಂವಕರ, ಖಜಾಂಚಿ ಪ್ರಮೋದ ಶಾನಭಾಗ, ಸಲಹೆಗಾರರಾದ ವಿಶ್ವನಾಥ ಶೆಟ್ಟಿ, ಸದಸ್ಯರಾದ ಗಣೇಶ ಹೆಬ್ಬಾರ್, ಉದಯ ಶೆಟ್ಟಿ, ಸೋಹನ ಶೆಟ್ಟಿ, ಸುಧಾಕರ ಶೆಟ್ಟಿ, ಚಂದ್ರು ಶೆಟ್ಟಿ, ಸಾಹಿತಿಗಳಾದ ಮುರ್ತುಜಾ ಹುಸೇನ ಆನೆಹೊಸೂರ್, ನಾರಾಯಣ ನಾಯ್ಕ, ಎ.ಆರ್. ಗೌಡ, ಕಲಾವಿದರಾದ ಎಸ್.ಎಸ್. ಕುರ್ಡೇಕರ, ಶಿವಾನಂದ ನಾಯ್ಕ, ನ್ಯಾಯವಾದಿ ಭಾಗ್ವತ್, ಪತ್ರಕರ್ತರಾದ ಸಂದೇಶ್ ಜೈನ್, ಚಂದ್ರಯ್ಯ ಅಂಧಕಾರಿಮಠ, ನಗರಸಭಾ ಸದಸ್ಯ ಡಿ. ಸ್ಯಾಮಸನ್, ದಾಂಡೇಲಿ ಪ್ರವಾಸೋದ್ಯಮಿಗಳ ಸಂಘದ ಕಾರ್ಯದರ್ಶಿ ಮೋಹನ ಹಲವಾಯಿ, ಶಿಕ್ಷಕಿಯರಾದ ಅನ್ನಪೂರ್ಣಾ ಪಾಠಣಕರ, ವೆಂಕಮ್ಮ ನಾಯಕ, ಸ್ನೇಹಲಾ ಕಿಂದಳ್ಕರ, ಹಮ್ಮಣ್ಣ ನಾಯಕ, ಸುರೇಶ ನಾಯಕ ಮುಂತಾದವರು ಉಪಸ್ಥಿತರಿದ್ದರು.