Home Important ತಿಳಿದವರೇ ಹೀಗೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಗೋಕರ್ಣ ಜನರದ್ದು

ತಿಳಿದವರೇ ಹೀಗೆ ಮಾಡಿದರೆ ಹೇಗೆ ಎನ್ನುವ ಪ್ರಶ್ನೆ ಗೋಕರ್ಣ ಜನರದ್ದು

SHARE

ಗೋಕರ್ಣ: ಗೋಕರ್ಣ ಒಂದು ಸುಂದರ ಪ್ರದೇಶ. ಇಲ್ಲಿ ನೂರಾರು ಜನರು ಸಿನೀಮಾ ಶೂ‍ಟಿಂಗ್ ಮಾಡಲು ಬರುತ್ತಾರೆ. ಅದರಂತೆ ಕಳೆದ ಎರಡು ದಿನಗಳಿಂದ ರಮೇಶ ಅರವಿಂದ ಅವರ ಬಟರ್ ಪ್ಲೈ ಚಲನ ಚಿತ್ರ ಚಿತ್ರೀಕರಣ ಆಗುತ್ತಿದೆ. ಚಿತ್ರೀಕರಣದ ನಂತರ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕಿ ಹೋಗಿದ್ದಾರೆ.

ಇಲ್ಲಿನ ಮಣಿಭದ್ರ ರಸ್ತೆಯಲ್ಲಿರುವ ಸಾಹಿತಿ ದಿ. ಗೌರೀಶ ಕಾಯ್ಕಿಣಿಯವರ ಮಗ ಜಯಂತ ಕಾಯ್ಕಿಣಿಯವರ ಮನೆ ಎದುರು ಕಸ ಚೆಲ್ಲಲಾಗಿದೆ. ಚಹ ಕುಡಿದ ಲೋಟಗಳು ಥರ್ಮಾಕೋಲ್ ಚೂರು, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆದಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಸಾಹಿತಿ ಜಯಂತ್ ಅವರ ಜೀವನದ ಯಶೋಗಾಥೆಯನ್ನು ಪರಿಚಯಿಸಿದ್ದರು ರಮೇಶ್ ಅರವಿಂದ್ . ಈಗ ಅದೇ ರಮೇಶ್ ನೇತೃತ್ವದ ಈ ತಂಡ, ಅದೇ ಕಾಯ್ಕಿಣಿ ಮನೆ ಎದುರು ಕಸದ ರಾಶಿ ಹಾಕಿರುವುದು ವಿಪರ್ಯಾಸವಾಗಿದೆ. ರಮೇಶ್ ಅರವಿಂದ ಅವರನ್ನು ಅನುಕರಿಸುವ ಸಾವಿರಾರು ಅಭಿಮಾನಿದ್ದಾರೆ. ಇಂತವರೇ ಹೀಗೆ ಮಾಡಿದರೆ ಹೇಗೆ ಎಂದು ಜನ ಆಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಯಾವ ಇಲಾಖೆ ಚಿತ್ರೀಕರಣಕ್ಕೆ ಅನುಮತಿ ನೀಡಿತ್ತೋ, ಅವರು ಸ್ವಚ್ಚತೆಯ ಬಗ್ಗೆ ಸಹ ಸೂಚನೆ ನೀಡಬೇಕಾಗಿದೆ ಎನ್ನುವುದು ಸ್ಥಳೀಯರ ವಾದವಾಗಿದೆ