Home Article ಸೇವೆಯಿಂದ ಆಗುವ ಸಾಧನೆ ಏನು? ಶ್ರೀಧರರು ಹೀಗೆ ಹೇಳಿದರು!

ಸೇವೆಯಿಂದ ಆಗುವ ಸಾಧನೆ ಏನು? ಶ್ರೀಧರರು ಹೀಗೆ ಹೇಳಿದರು!

SHARE

ಅಕ್ಷರರೂಪ: ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ.

ಸೇವೆಯಿಂದ ವಿನಯ ದೇಹದಲ್ಲಿ ನುರಿಯುತ್ತದೆ. ಮಮತ್ಕಾರ ಉಳಿಯುವದಿಲ್ಲ. ನಮ್ಮ ಬೇಕು-ಬೇಡಗಳ ಬಗ್ಗೆ ಲಕ್ಷ ಪೂರೈಸಲು ಆಗದಿರುವದರಿಂದ ಮನೋಜಯ ಸಾಧಿಸುತ್ತದೆ. ದೇಹಾಭಿಮಾನ ನಷ್ಟವಾಗುತ್ತದೆ. ಪರಮಾತ್ಮನ ಧ್ಯಾನ ಅಖಂಡವಾಗಿ ನಡೆಯುತ್ತದೆ.

(ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಮುಂದುವರಿದ ಪತ್ರದ ಕೊನೆಯ ಭಾಗ)

ಒಂದು ದೇಹದಲ್ಲಿ ಹೇಗೆ ಇಂದ್ರಿಯಗಳು ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತವೆಯೋ ಅದೇ ರೀತಿ ಒಂದು ಸದ್ಗುರುವಿನ ಸಂಪ್ರದಾಯದಲ್ಲಿ ಇರುವ ಜನರೆಲ್ಲಾ ತಮ್ಮ ತಮ್ಮ ಕಾರ್ಯ ಮಾಡಬೇಕು. ಆಗ ಕೆಲಸ ಹೆಚ್ಚಾಯಿತು ಎಂದು ಯಾರೊಬ್ಬರ ಮೇಲೇ ಭಾರ ಹೆಚ್ಚಾಗುವದಿಲ್ಲ. ಕೆಲವರು ಏಕಾಂತದಲ್ಲಿ ಕೆಲವರು ಲೋಕಾಂತದಲ್ಲಿ ಎಲ್ಲ ಸಮಯದಲ್ಲೂ ‘ಸುಖಸಮಾಧಾನ’ದಿಂದಲೇ ಹೋಗುತ್ತ ಸ್ವಪರಹಿತವನ್ನು ಎಲ್ಲರಿಗೂ ಸಾಧಿಸಲಿಕ್ಕೆ ಬರುತ್ತದೆ. ಉಪಾಸನೆಯ ಕಾರ್ಯವನ್ನೂ ವ್ಯವಸ್ಥಿತವಾಗಿ ನಡೆಸಲು ಬರುತ್ತದೆ. ಅನಂತ ಆನಂದಮಾತ್ರವಾಗಿರುವ ನಮ್ಮ ದಿವ್ಯಸ್ವರೂಪ ಎಂದೂ ದುಃಖ ಹೊಂದುವದಿಲ್ಲ. ಶೋಕ-ಮೋಹದ ಅಡಚಣಿಯೂ ಎಂದೂ ಆಗಲಿಕ್ಕೆ ಶಕ್ಯವಿಲ್ಲ. ಈ ನಿತ್ಯ ಸಚ್ಚಿದಾನಂದದಾತ್ಮಕ ಸ್ವರೂಪದೃಷ್ಟಿಯಿಂದ ನಿಮ್ಮ ನಿಮ್ಮ ಕೆಲಸಗಳನ್ನು ವ್ಯವಸ್ಥಿತವಾಗಿ ಮಾಡಬೇಕು. ಶಾಂತತೆ, ಗಾಂಭೀರ್ಯ, ಔದಾರ್ಯ, ಸರ್ವ ಸಮತ್ವ, ಆತ್ಮೀಯ ತೃಪ್ತಿ ಪ್ರತಿಯೊಂದು ಕಾರ್ಯದಲ್ಲೂ ಕಾಣುತ್ತಿರಬೇಕು.

ಎಲ್ಲರೂ ಒಕ್ಕಟ್ಟಿನಿಂದ ಇದ್ದೀರಲ್ಲಾ? ನಿಮ್ಮ ಅನುಕೂಲತೆಯಂತೆ ಮಾಡಿದ ಕಾರ್ಯವಿಭಾಗಕ್ಕೆ ಅನುಸಾರವಾಗಿಯೇ ಬೊಬ್ಬಾಟ ಮಾಡದೇ ಎಲ್ಲರೂ ನಡೆಯುತ್ತಿದ್ದೀರಲ್ಲಾ? ಚುರುಕಾಗಿ ಓಡಾಡುತ್ತಿರುವ ಎತ್ತಿಗೇ ಯಾವಾಗಲೂ ಎಲ್ಲ ಕೆಲಸ ಬೀಳುವಂತೆ ಆಗುತ್ತಿಲ್ಲವಲ್ಲಾ? ಇದು ಎಲ್ಲರಿಗೂ ನನ್ನ ಹೇಳಿಕೆ. ನವ್ಯ ನವೀನ ಜೀವನವೆಂದು ಶ್ರೀಸಮರ್ಥರ ಕಾರ್ಯ ಮಾಡುತ್ತಿರಿ. ಕ್ಷಣಕ್ಷಣಕ್ಕೂ ಹೊಸ ಹುರುಪು ರೂಢಿಸಿಕೊಳ್ಳಿ. ನಿಮ್ಮ ದಿನನಿತ್ಯದ ವರ್ತನೆ ಉತ್ತರೋತ್ತರ ಪ್ರಗತಿಪರವಾಗಿದೆ ಎಂದು ನಿಮಗೆ ಕಂಡುಬಂದು ಆನಂದ ಅನಿಸುತ್ತಾ ಇರುತ್ತಿರಬೇಕು.
ಶ್ರೀಸಮರ್ಥಕೃಪೆಯಿಂದ ಎಲ್ಲರಿಗೂ ಶಾಂತಿ ಲಭಿಸಿದೆಯಲ್ಲಾ? ಸೇವೆಯಿಂದ ಮನಸ್ಸು ಶಾಂತವಾಗುತ್ತದೆ. ಸೇವೆಗೆಂದು ನಡೆಯುವ ಕರ್ಮಗಳಲ್ಲಿ ಸ್ವಾರ್ಥ ಇಲ್ಲದಿರುವದರಿಂದ ಆ ಕರ್ಮಗಳು ಬಾಧಕವಾಗುವದಿಲ್ಲ. ಸೇವೆಯಿಂದ ವಿನಯ ದೇಹದಲ್ಲಿ ನುರಿಯುತ್ತದೆ. ಮಮತ್ಕಾರ ಉಳಿಯುವದಿಲ್ಲ. ನಮ್ಮ ಬೇಕು-ಬೇಡಗಳ ಬಗ್ಗೆ ಲಕ್ಷ ಪೂರೈಸಲು ಆಗದಿರುವದರಿಂದ ಮನೋಜಯ ಸಾಧಿಸುತ್ತದೆ. ದೇಹಾಭಿಮಾನ ನಷ್ಟವಾಗುತ್ತದೆ. ಪರಮಾತ್ಮನ ಧ್ಯಾನ ಅಖಂಡವಾಗಿ ನಡೆಯುತ್ತದೆ.

||ಸರ್ವೇ ಜನಾಃ ಸುಖಿನೋ ಭವಂತು||
ಶ್ರೀಧರ