Home Local ಕುಮಟಾ ಕಸಾಪದಿಂದ ದಿ.ಚಿಟ್ಟಾಣಿಯವರಿಗೆ ನುಡಿನಮನ ಕಾರ್ಯಕ್ರಮ

ಕುಮಟಾ ಕಸಾಪದಿಂದ ದಿ.ಚಿಟ್ಟಾಣಿಯವರಿಗೆ ನುಡಿನಮನ ಕಾರ್ಯಕ್ರಮ

SHARE

ಕುಮಟಾ : ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಗಲಿದ ದಿವ್ಯ ಯಕ್ಷ ಚೇತನ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ನುಡಿ ನಮನ ಕಾರ್ಯಕ್ರಮ ನಗರದ ವೈಭವ ಪ್ಯಾಲೇಸ್ ನ ಸಭಾಂಗಣದಲ್ಲಿ ನಡೆಯಿತು. ಬಿಜೆಪಿ ಮುಖಂಡ ಮಾಜಿ ಶಾಸಕ ದಿನಕರ ಶೆಟ್ಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿಟ್ಟಾಣಿಯವರ ಜೊತೆಗಿನ ಒಡನಾಟವನ್ನು ಮೆಲುಕುಹಾಕಿದರು.

ಕಾರ್ಯಕ್ರಮದಲ್ಲಿ ಯಕ್ಷ ಕಣ್ಮಣಿ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಬಗ್ಗೆ ನುಡಿ ನಮನ ಸಲ್ಲಿಸಲಾಯಿತು. ಶ್ರೀಧರ್ ನಾಯ್ಕ ವಕ್ನಳ್ಳಿ, ಕಲಾವಿದ ರಮೇಶ್ ಬಂಢಾರಿ, ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶ್ರೀಧರ ಉಪ್ಪಿನಗಣಪತಿ, ಕಲಾವಿದ ಗಂಪಣ್ಣ ಹಾಗೂ ಇನ್ನಿತರ ಚಿಟ್ಟಾಣಿ ಅಭಿಮಾನಿಗಳು ಪಾಲ್ಗೊಂಡಿದ್ದರು.