Home Health ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಫಿಟ್ಸ್ ಬರುವ ಸಂಭವವಿದೆ.!?

ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ತಿಂದರೆ ಫಿಟ್ಸ್ ಬರುವ ಸಂಭವವಿದೆ.!?

SHARE

ನೋಡಲು ಕೆಂಪಗೆ, ಒಳಗಡೆ ಲೋಳೆಯಂತಿರುವ …ಈ ಹಣ್ಣನ್ನು ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿಂದರೆ…ಫಿಟ್ಸ್ ಬಂದು ಪ್ರಾಣ ಹೋಗುವ ಪರಿಸ್ಥಿತಿ ಬರಲೂಬಹುದು. ವಿಜ್ಞಾನಿಗಳು ಇದರ ಬಗ್ಗೆ ಪ್ರಯೋಗಗಳನ್ನು ನಡೆಸಿ ಈ ತೀರ್ಮಾನಕ್ಕೆ ಬಂದಿದ್ದಾರೆ. ಇಷ್ಟಕ್ಕೂ ಆ ಹಣ್ಣು ಯಾವುದೆಂದು ನಿಮಗೆ ಗೊತ್ತೇ…? ಕರೆಕ್ಟ್… ಸರಿಯಾಗೇ ಊಹಿಸಿದಿರಿ.

 ನೀವಂದುಕೊಂಡಂತೆ ಅದು ‘ಲಿಚಿ’ ಹಣ್ಣು. ಇದನ್ನು ಖಾಲಿ ಹೊಟ್ಟೆಯಲ್ಲಿ ತಿಂದರೆ, ಅಷ್ಟೇ, ದೇವರೇ ನಿಮ್ಮನ್ನು ಕಾಪಾಡಬೇಕು !

ಬಿಹಾರಿನ ಮುಜಫರ್ ಪ್ರದೇಶ. ಅಲ್ಲಿ 2014 ರಿಂದಲೂ ನೂರಾರು ಸಂಖ್ಯೆಯಲ್ಲಿ ಮಕ್ಕಳು ಸಾವಿನಂಚಿಗೆ ತಲುಪಿದ್ದರು. ಭಾರತ ಹಾಗೂ ಅಮೆರಿಕಾ ದೇಶದ ವಿಜ್ಞಾನಿಗಳು ಈ ಮಕ್ಕಳನ್ನು ಕಾಡುತ್ತಿರುವ ವ್ಯಾಧಿಯ ಬಗ್ಗೆ ಸಂಶೋಧನೆ ಪ್ರಾರಂಭಿಸಿದರು. ಈ ರೀತಿ ಯಾಕಾಗುತ್ತೆಂದು ಕಂಡುಹಿಡಿದರು. ನ್ಯಾಷನಲ್ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ವಿಜ್ಞಾನಿಗಳು(ಎನ್ ಸಿ ಡಿ ಸಿ), ಒಂದೇ ವ್ಯಾಧಿ ಲಕ್ಷಣಗಳಿರುವ 390 ಮಕ್ಕಳನ್ನು ಗುಂಪುಗಳನ್ನಾಗಿ ವಿಂಗಡಿಸಿ ಪರೀಕ್ಷೆ ಮಾಡಿದರು. ದುರದೃಷ್ಟವಶಾತ್ ಆ ಮಕ್ಕಳಲ್ಲಿ 122 ಮಂದಿ ಮೃತರಾದರು. ಆದರೆ,ಎಲ್ಲರಲ್ಲೂ ಒಂದೇ ವ್ಯಾಧಿಯ ಲಕ್ಷಣಗಳಿರುವುದರಿಂದ ಪರಿಶೋಧನೆ ನಡೆಸಿದ ನಂತರ ಕಂಡು ಬಂದದ್ದೇನೆಂದರೆ…ಅವರಿಗೆ ಹೈಪೋ ಗ್ಲೈಸೆಮಿಕ್ ಎನ್ಸೆಫಾಲೋಪತಿ ಎಂದು ಕರೆಯಲ್ಪಡುವ ,ನರಸಂಬಂಧಿ ವ್ಯಾಧಿಯಿಂದಾಗಿ ಫಿಟ್ಸ್ ಬಂದು ಮೃತರಾಗುತ್ತಿದ್ದಾರೆಂದು ತಿಳಿಯಿತು.

ಆ ಮಕ್ಕಳಿಗೆ ಆ ವ್ಯಾಧಿ ಹೇಗೆ ಬಂತೆಂದೂ ಸಹ ಕಂಡುಕೊಂಡರು. ಅವರೆಲ್ಲರೂ ರಾತ್ರಿ ಸಮಯದಲ್ಲಿ ಊಟಮಾಡದೆ ಖಾಲೀ ಹೊಟ್ಟೆಯಲ್ಲಿದ್ದು, ಮಾರನೆ ದಿನ ಬೆಳಿಗ್ಗೆ ಲಿಚಿ ಹಣ್ಣುಗಳನ್ನು ಹೊಟ್ಟೆ ತುಂಬುವವರೆಗೆ ತಿನ್ನುತ್ತಿದ್ದರಂತೆ. ಇದರಿಂದಾಗಿ ಆ ಮಕ್ಕಳ ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತಿದ್ದು, ಆ ಹಣ್ಣುಗಳಲ್ಲಿರುವ ಮಿಥೈಲಿನ್ ಸೈಕ್ಲೋ ಪ್ರೊಫೈಲ್ ಗ್ಲೈಸಿನ್ ( ಎಂಸಿಪಿಜಿ), ಹೈಪೋಗ್ಲೈಸಿನ್ ಏ ಎಂಬ ಹಲವು ರಾಸಾಯನಿಕಗಳು ಅವರಿಗೆ ಈ ವ್ಯಾಧಿಯನ್ನುಂಟುಮಾಡಿತ್ತಂತೆ.ಇದರಿಂದಾಗಿ ಅವರಿಗೆ ಫಿಟ್ಸ್ ಬಂದು ಮೃತರಾದರಂತೆ. ಸಾಕಷ್ಟು ಆಹಾರ ದೊರೆಯದೇ ಇರುವುದು, ಸ್ಥಳೀಯವಾಗಿ ಲಿಚಿ ಹಣ್ಣುಗಳು ಹೇರಳವಾಗಿ ದೊರೆಯುವುದರಿಂದ, ಮಕ್ಕಳು ಆ ಹಣ್ಣುಗಳನ್ನು ತಿನ್ನಲು ಅಭ್ಯಾಸಮಾಡಿಕೊಂಡರು. ಈ ಹಣ್ಣುಗಳನ್ನು ತಿಂದು ಕೆಲವರು ಮೃತರಾದರೆ, ಮತ್ತಷ್ಟು ಮಕ್ಕಳು ನರಸಂಬಂಧಿ ರೋಗಗಳಿಂದ ನರಳುತ್ತಿದ್ದಾರೆ. ಆದುದರಿಂದ ಜಾಗ್ರತೆಯಿಂದಿರಿ. ಖಾಲಿ ಹೊಟ್ಟೆಯಲ್ಲಿ ‘ಲಿಚಿ’ ಹಣ್ಣುಗಳನ್ನು ತಿನ್ನಲೇಬಾರದು..!