Home Local ಕುಮಟಾದ ಸುತ್ತ ಮುತ್ತ ನಡೀತಿದೆ “ಚಮಕ್” ಚಿತ್ರೀಕರಣ!

ಕುಮಟಾದ ಸುತ್ತ ಮುತ್ತ ನಡೀತಿದೆ “ಚಮಕ್” ಚಿತ್ರೀಕರಣ!

SHARE

ಕುಮಟಾ: ‘ಸಿಂಪಲ್ಲಾಗ್ ಒಂದು ಲವ್ ಸ್ಟೋರಿ’ ಸಿನಿಮಾದ ನಿರ್ದೇಶಕ ಸಿಂಪಲ್ ಸುನಿಯ ‘ಚಮಕ್’ ಸಿನಿಮಾದ ಶೂಟಿಂಗ್ ಪ್ರವಾಸಿಗರ ಸ್ವರ್ಗ, ಉತ್ತರ ಕನ್ನಡ ಜಿಲ್ಲೆಯ ವಿವಿಧ ಕಡಲತೀರಗಳಲ್ಲಿ ನಡೆಯುತ್ತಿದೆ.

ಗೋಲ್ಡನ್ ಸ್ಟಾರ್ ಗಣೇಶ್ ನಾಯಕನಾಗಿ ಹಾಗೂ ‘ಕಿರಿಕ್ ಪಾರ್ಟಿ’ಯ ಹುಡುಗಿ ನಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ಅಭಿನಯಿಸುತ್ತಿರುವ ಈ ’ಚಮಕ್’ ಚಿತ್ರವು ರೊಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದೆ.

‘ಚಮಕ್’ನಲ್ಲಿರುವ ಕೆಲ ರೊಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ಕಳೆದ ಒಂದು ವಾರದಿಂದ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದಲ್ಲಿನ ನೇತ್ರಾಣಿ ಸ್ಕೂಬಾ ಡೈವಿಂಗ್, ಕುಮಟಾದ ನುಶಿಕೋಟೆ, ಗೋಕರ್ಣದ ಹಿರೇಗುತ್ತಿ ಹಾಗೂ ಶನಿವಾರ ಕಾರವಾರದ ಪ್ರಸಿದ್ದ ತೀಳ್‌ಮಾತಿ ಕಡಲತೀರದಲ್ಲಿ (ಕಪ್ಪು ಮರಳಿನ ಬೀಚ್) ನಡೆಯಿತು.

ಗೋಕರ್ಣದ ಹಿರೇಗುತ್ತಿಯಲ್ಲಿ ಚಿತ್ರೀಕರಿಸಲ್ಪಟ್ಟ ರೊಮ್ಯಾಂಟಿಕ್‌ ಹಾಡೊಂದಕ್ಕೆ ಹಾಗೂ ಕಾರವಾರದ ತೀಳ್‌ಮಾತಿಯಲ್ಲಿ ತೆಗೆದ ಹಾಡಿಗೆ ಡ್ರೋನ್ ಕ್ಯಾಮೆರಾ ಬಳಸಿಕೊಳ್ಳಲಾಗಿದೆ. ಅಂದ ಹಾಗೆ ಈ ಎರಡೂ ಹಾಡಿನಲ್ಲಿ ರಶ್ಮಿಕಾ ಸ್ವಲ್ಪ ಗ್ಲ್ಯಾಮರ್‌ ಆಗಿ ಕಾಣಿಸಿಕೊಂಡಿದ್ದಾರೆ. ಗಣೇಶ್ ‘ಮುಗುಳು ನಗೆ’ಯಲ್ಲಿ ಕಂಡಂತೆಯೆ ಅದೇ ತೆರನಾದ ಹೇರ್‌ ಸ್ಟೈಲ್‌ನಲ್ಲಿ ಮಿಂಚಿದ್ದಾರೆ.