Home Article ಸಮಾಜದಲ್ಲಿ ಕಾರ್ಯ ಮಾಡುವಾಗ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು.

ಸಮಾಜದಲ್ಲಿ ಕಾರ್ಯ ಮಾಡುವಾಗ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು.

SHARE

ಅಕ್ಷರರೂಪ ; ಶ್ರೀಮತಿ ಪ್ರಭಾ ಮತ್ತು ವೆಂಕಟರಮಣ ಭಟ್ಟ ಪುಣೆ

ಸಮಾಜದಲ್ಲಿ ಕಾರ್ಯ ಮಾಡುವಾಗ ಹೆಜ್ಜೆ ಹೆಜ್ಜೆಗೆ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು. ಅಲ್ಲಿ ನಮ್ಮ ಶಾಂತಿ -ಸಮಾಧಾನ ಇತ್ಯಾದಿ ಸಾಧನೆಯಿಂದ ದೊರಕಿಸಿದ ಸದ್ಗುಣಗಳ ಜೊತೆ ಬೇಕಾಗುತ್ತದೆ.

(ಇಸವಿ ಸನ ೧೯೫೦-೫೧ರ ಸುಮಾರಿಗೆ ಚಿ. ದಿನಕರ ಬುವಾ ರಾಮದಾಸಿ ಸಜ್ಜನಗಡ ಇವರಿಗೆ ಬರೆದ ಇನ್ನೊಂದು ಪತ್ರ)

||ಶ್ರೀರಾಮ ಸಮರ್ಥ||
ಕುರುಗಡ್ಡಿ
ಶುಕ್ರವಾರ, ಭಾದ್ರಪದ, ವ|
ಚಿ. ದಿನಕರನಿಗೆ ಆಶೀರ್ವಾದ,

‘ಆಂದೋಲನದಲಿ ಸಾಮರ್ಥ್ಯವಿದೆ| ಯಾರಾ್ಯರು ಮಾಡುವರೋ ಮಾಡಲಿ|
ಆದರೆ ಅಲ್ಲಿ ಭಗವಂತನ| ಅಧಿಷ್ಠಾನ ಇರಬೇಕು|’
‘ಹೋಗುವ ಸ್ಥಳವನವ ಹೇಳುವದಿಲ್ಲ|’ – ಇಲ್ಲಿ ಇದೇ ವಾಕ್ಯದ್ದೇ ನೆನಪಾಗುತ್ತಿದೆ.

ಸ್ಥಳ ಗೊತ್ತಾದರೆ ‘ಬಾರೋ ನನ್ನ ಹಿಂದೆ’ ಎಂದೆನ್ನಬಹುದು ಅದಲ್ಲದಿದ್ದಲ್ಲಿ ಮತ್ತೆ ಪುನಃ ಮೂರನೇ ಕಡೆಗೆ ಹೋಗುವ ತಯಾರಿ ಮಾಡಬೇಕಾಗಬಹುದು. ದೇವರು ನೋಡಲಿ ಮತ್ತು ಹಾಗಾಗದಿರಲಿ.
ಸದ್ಯ ಮುಂದಿನ ಸುಖಸ್ವಪ್ನಗಳ ಉತ್ಸಾಹ ತರಿಸುವ ಆನಂದದಾಯಿ ಕಲ್ಪನೆ ಮಾಡುತ್ತ, ಎಷ್ಟಾಗುತ್ತದೋ ಅಷ್ಟು ವಿವೇಕ ವಿಚಾರಗಳಿಂದ ಸೇವೆಯ ಕೆಲಸ ಸುವ್ಯವಸ್ಥೆಯಿಂದ ಮಾಡಿ ಮುಗಿಸಿರಿ. ಆಗ ಸಂಘಟಿತ ಕಾರ್ಯದಲ್ಲಿ ಶಾಂತಿ-ಸಮಾಧಾನ ಲಭಿಸುತ್ತದೆ ಮತ್ತು ಯಾವುದೇ ಒಬ್ಬರ ಮೇಲೆ ಕೆಲಸದ ಭಾರ ಬೀಳುವದಿಲ್ಲ.

‘ಯೋಗಿನಃ ಕರ್ಮಕುರ್ವಂತಿ ಸಂಗಂ ತ್ಯಕ್ತ್ವಾಸಶುದ್ಧಯೇ’
ತಮ್ಮ ಪ್ರತ್ಯೇಕ ಕೆಲಸದಿಂದಲೂ ಆತ್ಮಸಮಾಧಾನ ಹೆಚ್ಚುತ್ತಾ ಹೋಗಬೇಕು.
‘ಅದೆಂತ ಶುದ್ಧ ನಿಸ್ಪ್ರಹ ಜಾತಿ| ಮಾಡುವನು ಲಾಭವಿಲ್ಲದೇ ಪ್ರೀತಿ|’
ಸಮಾಜದಲ್ಲಿ ಕಾರ್ಯ ಮಾಡುವಾಗ ಹೆಜ್ಜೆ ಹೆಜ್ಜೆಗೆ ಎಲ್ಲ ಪ್ರಾಣಿಮಾತ್ರರಿಂದ ಆತ್ಮಪ್ರೇಮದ ಮಂಗಲದರ್ಶನ ಆಗಬೇಕು. ಅಲ್ಲಿ ನಮ್ಮ ಶಾಂತಿ -ಸಮಾಧಾನ ಇತ್ಯಾದಿ ಸಾಧನೆಯಿಂದ ದೊರಕಿಸಿದ ಸದ್ಗುಣಗಳ ಜೊತೆ ಬೇಕಾಗುತ್ತದೆ. ಶಾಲೆಯಲ್ಲಿ ಕಲಿತಂತೆ ಸಮಾಜದಲ್ಲಿ ಕಾರ್ಯ ಮಾಡುತ್ತಿರುವಾಗ ಬಹಳ ಶಿಕ್ಷಣ ಸಿಗುತ್ತದೆ; ನಮ್ಮ ಅಧಿಕಾರದ ಅರ್ಥವಾಗುತ್ತದೆ. ಸ್ವಪರ ಉದ್ಧಾರದ ಉದಾತ್ತ ಮತ್ತು ಪವಿತ್ರ ಆಧ್ಯಾತ್ಮಿಕ ಜೀವನವೆಂದರೇ ಪರಮಾರ್ಥ.

‘ದೇವರ ಮನೋಗತದಂತೆ ನಡೆಯಬೇಕು|’ ಎಂದುಕೊಂಡು ನಾನು ಕೆಲ ಕಾಲ ಸಮಾಜದಲ್ಲಿ ಬೆರೆಯುವದಿಲ್ಲ. ಮುಂದೆ ಕಟ್ಟೆಯೇ ಒಡೆದು ಎಲ್ಲ ತರಹದ ಅನುಕೂಲತೆಯ ಮಹಾಪೂರವೇ ಯಾಕೆ ಬರಬಾರದು?

‘ಮನಸ್ಸಿನಲ್ಲಿದ್ದಂತೆಯೇ ಆಗುತ್ತದೆ| ಎಲ್ಲ ವಿಘ್ನಗಳೂ ನಾಶವಾಗುತ್ತವೆ| ರಘುನಾಥನ ಕೃಪೆಯೊಂದಾದರೆ| ಅದರನುಭವವಾಗುವದು||’
ನಿಮ್ಮ ಸೇವೆ ಪರಮೇಶ್ವರನಿಗೆ ತೃಪ್ತಿಕರವಾಗಿ ಅವನ ಕೃಪೆಯಿಂದ ನೀವು ಸದೈವ ಕೃತಕೃತ್ಯರಾಗಿರಿ.

ಶ್ರೀಧರ