Home Important ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಸಿಎಂ ಒಮ್ಮೆ ಈ ಮಾರ್ಗದ ಮೂಲಕ ತೆರಳಲಿ!

ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಸಿಎಂ ಒಮ್ಮೆ ಈ ಮಾರ್ಗದ ಮೂಲಕ ತೆರಳಲಿ!

SHARE

ಬೆಂಗಳೂರು: ಮೈಸೂರು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಸಾವು ಎಂಬುದು ಕಟ್ಟಿಟ್ಟ ಬತ್ತಿ ಎಂಬಂತಹ ಸನ್ನಿವೇಶ ನಿರ್ಮಾಣವಾಗಿದೆ. ಭಾನುವಾರ ಮೈಸೂರು ರಸ್ತೆಯಲ್ಲಿ ಗುಂಡಿಯನ್ನು ತಪ್ಪಿಸಲು ಹೋಗಿ ಇಟ್ಟಿಗೆ ಲಾರಿಗೆ ಡಿಕ್ಕಿ ಹೊಡೆದು ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ.

ಮೆಟ್ರೋ ಕಾಮಗಾರಿ ಆರಂಭವಾದಾಗಿನಿಂದ ಸಮಸ್ಯೆ ಮತ್ತಷ್ಟು ಹೆಚ್ಚಿದೆ, ಮೋಡ ಕಟ್ಟಿದ ವಾತಾವರಣವಿದ್ದರೇ ದ್ವಿಚಕ್ರ ವಾಹನ ಸವಾರರಿಗೆ ಸಂಚಾರ ಮಾಡುವುದು ದುಸ್ತರವಾಗುತ್ತಿದೆ. ವಾತಾವರಣದ ದೂಳಿಗೆ ರಸ್ತೆಗಳು ಸರಿಯಾಗಿ ಕಾಣುವುದಿಲ್ಲ, ಮಳೆ ಬಂದ ವೇಳೆ ಗುಂಡಿಗಳಲ್ಲಿ ನೀರು ತುಂಬಿಕೊಂರುತ್ತದೆ, ರಸ್ತೆ ಹೇಗಿದೆ ಎಂಬುದನ್ನು ಸವಾರರು ಕಲ್ಪಿಸಿಕೊಳ್ಳಲಪ ಸಾಧ್ಯವಾಗುವುದಿಲ್ಲ, ಸಿಮೆಂಟ್ ಮತ್ತು ಅವಶೇಷಗಳಿಂದ ಅವೈಜ್ಞಾನಿಕವಾಗಿ ಗುಂಡಿಗಳನ್ನು ಮುಚ್ಚಿರುವುದು ರಸ್ತೆಯನ್ನು ಮತ್ತಷ್ಟು ಹಾಳು ಮಾಡಿದೆ.
ಸತತವಾಗಿ ನಡೆಯುತ್ತಿರುವ ದುರಂತಗಳಿಂದ ಆಕ್ರೋಶಗೊಂಡಿರುವ ಸ್ಥಳೀಯ ನಾಗರಿಕರು, ಸಿಎಂ ಸಿದ್ದರಾಮಯ್ಯ ತಮ್ಮ ಸ್ವಕ್ಷೇತ್ರ ಮೈಸೂರಿಗೆ ತೆರಳುವಾಗ ಈ ರಸ್ತೆಯಲ್ಲಿ ಸಂಚರಿಸಲಿ ಎಂದು ಆಗ್ರಹಿಸಿದ್ದಾರೆ. ಆಗ ಮಾತ್ರ ಜನ ಕಷ್ಟ ಏನು ಎಂಬುದು ಸಿಎಂ ಸಿದ್ದರಾಮಯ್ಯ ಅವರಿಗೆ ಗೊತ್ತಾಗುತ್ತದೆ ಎಂದು ಆಗ್ರಹಿಸಿದ್ದಾರೆ.

ಮೈಸೂರು ರಸ್ತೆ ಈ ಪರಿಸ್ಥಿತಿಗೆ ತಲುಪಿದ್ದರು ಸರ್ಕಾರ ಏಕೆ ಮೌನವಾಗಿದೆ, ಯಾವುದೇ ರಿಪೇರಿ ಕಾಮಗಾರಿ ಆರಂಭಿಸಿಲ್ಲ ಎಂದು ಸ್ತಳೀಯ ನಾಗರಿಕರು ಪ್ರಶ್ನಿಸಿದ್ದಾರೆ, ಸದಾ ಮೈಸೂರಿಗೆ ಹೆಲಿಕಾಪ್ಟರ್ ನಲ್ಲಿ ಸಂಚರಿಸುವ ಸಿಎಂ ಒಮ್ಮೆ ಈ ಮಾರ್ಗದ ಮೂಲಕ ತೆರಳಲಿ, ಆಗ ಜನ ಸಾಮಾನ್ಯರ ಕಷ್ಠ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.
ಮೈಸೂರು ರಸ್ತೆಯಲ್ಲಿರುವ ರಾಜರಾಜೇಶ್ವರಿ ನಗರದ ಕಾರ್ಯಕ್ರಮಗಳಿಗೆ ಸಿಎಂ ಈ ರಸ್ತೆ ಮೂಲಕ ತೆರಳುವಾಗ ಬಿಬಿಎಂಪಿ ಪ್ಯಾಚ್ ಅಪ್ ಕೆಲಸಗಳನ್ನು ಮಾಡುತ್ತದೆ, ಆಗ ಸಿಎಂ ಗೆ ಇಲ್ಲಿನ ಸಮಸ್ಯೆಗಳ ಬಗ್ಗೆ ಅರಿವಾಗುತ್ತದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.