Home Local ಹೊನ್ನಾವರದಲ್ಲಿ ಗುರುವಂದನೆ ಮತ್ತು ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ

ಹೊನ್ನಾವರದಲ್ಲಿ ಗುರುವಂದನೆ ಮತ್ತು ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮ

SHARE

ಹೊನ್ನಾವರ; ತಾಲ್ಲೂಕಿನ ಗುಣವಂತೆಯಲ್ಲಿ ಒಕ್ಕಲಿಗರ ಸಂಘದವರು ಏರ್ಪಡಿಸಿದ್ದ ಗುರುವಂದನೆ ಮತ್ತು ಒಕ್ಕಲಿಗರ ಸಮುದಾಯ ಭವನದ ಶಿಲಾನ್ಯಾಸ ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ತಮ್ಮ ಅಮೃತ ಹಸ್ತದಿಂದ ನೆರವೇರಿಸಿರು. ಇದೇ ಸಂದರ್ಭದಲ್ಲಿ ಅವರು ಸದ್ಭಕ್ತರಿಗೆ ಆಶೀರ್ವಚನ ನೀಡಿದರು.

ಹೊನ್ನಾವರ ತಾಲ್ಲೂಕಿನ ಸದ್ಭಕ್ತರು ಪೂಜ್ಯ ಮಹಾ ಸ್ವಾಮೀಜಿಯವರನ್ನು ಭವ್ಯ ಮೆರವಣಿಗೆಯಲ್ಲಿ ಕರೆತಂದು ಗುರುವಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿಗಳವರು, ಶಾಸಕರಾದ ಮಂಕಾಳ ವೈದ್ಯ, ಒಕ್ಕಲಿಗರ ಸಂಘದವರು, ಗುಣವಂತೆಯ ಸುತ್ತಮುತ್ತಲಿನ ಗ್ರಾಮಸ್ಥರು ಹಾಗೂ ಗಣ್ಯರು ಉಪಸ್ಥಿತರಿದ್ದರು.