Home Local ಅವೈಜ್ಙಾನಿಕ ಪರೀಕ್ಷಾ ವೇಳಾಪಟ್ಟಿ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ

ಅವೈಜ್ಙಾನಿಕ ಪರೀಕ್ಷಾ ವೇಳಾಪಟ್ಟಿ ವಿರೋಧಿಸಿ ಕಾರವಾರದಲ್ಲಿ ಪ್ರತಿಭಟನೆ

SHARE

ಕಾರವಾರ : ಕರ್ನಾಟಕ ವಿಶ್ವವಿದ್ಯಾಲಯ ಈ ಬಾರಿ ಪರೀಕ್ಷೆಯ ವೇಳಾಪಟ್ಟಿಯನ್ನು ಅವೈಜ್ಙಾನಿಕವಾಗಿ ನಿಗದಿಪಡಿಸಿದ್ದು ಇದು ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಧಕ್ಕೆಯಾಗಲಿದೆ ಎಂದು ಆರೋಪಿಸಿ ಇಂದು ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದರುಗಡೆ ಪ್ರತಿಭಟನೆ ನಡೆಸಿದರು.

ಅವಧಿ ಪೂರ್ವ ಪರೀಕ್ಷೆಗೆ ವಿಶ್ವವಿದ್ಯಾಲಯ ತಯಾರಿ ನಡೆಸಿದೆ‌. ಹಾಗೂ ಒಂದು ಪರೀಕ್ಷೆಯಿಂದ ಮತ್ತೊಂದು ಪರೀಕ್ಷಗೆ ಯಾವುದೇ ಸಮಯಾವಕಾಶ ನೀಡಿಲ್ಲದ್ದು ಆರೋಪಿಸಿದರು. ಆದ್ದರಿಂದ ನಗರದ ಸರ್ಕಾರಿ ಪದವಿ ಕಾಲೇಜಿನ ನೂರಾರು ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ವಿರುದ್ದ ಪ್ರತಿಭಟನೆ ನಡೆಸಿದ್ದು ಈ ಕೂಡಲೇ ಪ್ರಕಟಿಸಿದ ನಿರ್ಧಾರ ಹಿಂಪಡಿಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.