Home Important ಇಬ್ಬರು ಯುವಕರು ನೀರುಪಾಲು : ಯಲ್ಲಾಪುರದಲ್ಲಿ ಘಟನೆ

ಇಬ್ಬರು ಯುವಕರು ನೀರುಪಾಲು : ಯಲ್ಲಾಪುರದಲ್ಲಿ ಘಟನೆ

SHARE

ಯಲ್ಲಾಪುರ : ಪ್ರವಾಸಕ್ಕೆಂದು ಸ್ನೇಹಿತರೊಂದಿಗೆ ಜಲಪಾತಕ್ಕೆ ತೆರಳಿದ್ದ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಬಾಸಲ್ ಸಮೀಪದ ಕಾನೂರು ಜಲಪಾತದಲ್ಲಿ ರವಿವಾರ ,ನಡೆದಿದ್ದು, ಇಂದು ಮಂಗಳವಾರ ಶವ ಪತ್ತೆಯಾಗಿದೆ.

ತಾಲೂಕಿನ ಮಾವಿನಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾನೂರು ಫಾಲ್ಸ್ ಗೆ ಹೋಗಿದ್ದ ಯಲ್ಲಾಪುರದ ಕಾಳಮ್ಮನಗರ ನಿವಾಸಿ ಕಿಗನ್ ವಿನೋದ ಪರ್ನಾಂಡಿಸ್ (21), ಗಣಪತಿಗಲ್ಲಿ ನಿವಾಸಿ ಸಿಲ್ವನ್ ಲಾರೆನ್ಸ್ ಪರ್ನಾಂಡಿಸ್ (17) ಜಲಪಾತದಲ್ಲಿ ಮುಳುಗಿ ಮೃತಪಟ್ಟ ದುರ್ದೈವಿಗಳಾಗಿದ್ದಾರೆ.

ನಾಲ್ವರು ಸೇರಿ ಜಲಪಾತ ವೀಕ್ಷಣೆಗೆ ತೆರಳಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಕಾಲೇಜಿನಲ್ಲಿ ಓದುತಿದ್ದ ವಿದ್ಯಾರ್ಥಿಗಳಾಗಿದ್ದರು ಎಂದು ತಿಳಿದು ಬಂದಿದೆ.

ಕಳೆದೆರಡು ದಿನದಿಂದ ಯಲ್ಲಾಪುರ ಪೊಲೀಸರು ಕಾಣೆಯಾಗಿದ್ದ ಈ ಯುವಕರ ಶೋಧ ಕಾರ್ಯದಲ್ಲಿ ನಿರತರಾಗಿದ್ದರು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ತಾಲ್ಲೂಕಾ ಆಸ್ಪತ್ರೆಗೆ ತರಲಾಗಿದೆ.

ಪೊಲೀಸ್ ನಿರೀಕ್ಷಕ ಡಾ.ಮಂಜುನಾಥ ನಾಯಕ, ಉಪ ನಿರೀಕ್ಷಕ ಶ್ರೀಧರ್ ಎಸ್.ಆರ್ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳು ಪ್ರಕರಣ ದಾಖಲಿಸಿಕೊಂಡಿದ್ದಾರೆ.