Home Local ಬಿ ಜೆ ಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಮನವಿ,ಪರಿಹಾರಕ್ಕೆ ಆಗ್ರಹ

ಬಿ ಜೆ ಪಿ ಕಾರ್ಯಕರ್ತನ ಹತ್ಯೆ ಖಂಡಿಸಿ ಮನವಿ,ಪರಿಹಾರಕ್ಕೆ ಆಗ್ರಹ

SHARE

ದಾಂಡೇಲಿ:ಬಿಜೆಪಿ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದ ಜುಬೇರ ಅಹಮದ ಅವರ ಬರ್ಬರ ಹತ್ಯೆಯನ್ನು ಖಂಡಿಸಿ, ಹತ್ಯೆಗೈದ ಆರೋಪಿಗಳನ್ನು ತಕ್ಷಣವೆ ಬಂಧಿಸಿ, ಶಿಕ್ಷೆಗೆ ಒಳಪಡಿಸಬೇಕು ಮತ್ತು ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾವು ಮಂಗಳವಾರ ನಗರದ ವಿಶೇಷ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಮನವಿ ನೀಡಿತು.

ಮನವಿಯಲ್ಲಿ ಇತ್ತೀಚೆಗೆ ರಾಜ್ಯದಲ್ಲಿ ಜರುಗುತ್ತಿರುವ ಬಿಜೆಪಿ ಕಾರ್ಯಕರ್ತರ ಹತ್ಯೆಗಳನ್ನು ಗಮನಿಸಿದರೆ ರಾಜ್ಯದಲ್ಲಿ ಶಾಂತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ರಾಜ್ಯ ಸರಕಾರವು ಸಂಪೂರ್ಣ ವಿಫಲವಾಗಿದೆ. ಹತ್ಯೆಗೈದ ಆರೋಪಿಗಳನ್ನು ಇದುವರೆಗೆ ಬಂಧಿಸಲಾಗದಿರುವುದು ದೊಡ್ಡ ದುರಂತ ಎಂದು ವಿವರಿಸಿರುವುದರ ಜೊತೆಗೆ ಜುಬೇರ ಅಹಮದ ಅವರನ್ನು ಹತ್ಯೆಗೈದ ಆರೋಪಿಗಳನ್ನು ತಕ್ಷಣವೆ ಬಂಧಿಸಿ ಶಿಕ್ಷೆಗೊಳಪಡಿಸಬೇಕು. ಹತ್ಯೆಯಾದ ಜುಬೇರ ಅಹಮದ ಅವರ ಕುಟುಂಬಕ್ಕೆ ರೂ:40 ಲಕ್ಷ ಪರಿಹಾರವನ್ನು ನೀಡಬೇಕು. ಗಾಂಜಾ ಮತ್ತು ಡ್ರಗ್ಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕು. ಮಂಗಳೂರಿನ ಉಸ್ತುವಾರಿ ಸಚಿವ ರಮಾನಾಥ ರೈ ಹಾಗೂ ಸಚಿವ ಹಾಗೂ ಸ್ಥಳೀಯ ಶಾಸಕ ಯು.ಟಿಖಾದರ ಅವರುಗಳು ಈ ಘೋರ ಕೃತ್ಯದ ನೈತಿಕ ಜವಾಬ್ದಾರಿ ಹೊತ್ತು ರಾಜಿನಾಮೆ ನಡಬೇಕೆಂದು ಹಾಗೂ ಜುಬೇರ್ ಅಹಮದ ಕುಟುಂಬಕ್ಕೆ ನ್ಯಾಯದೊರಕಿಸಿಕೊಡಬೇಕೆಂದು ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಬಿಜೆಪ ಅಲ್ಪಸಂಖ್ಯಾತ ಜಿಲ್ಲಾ ಘಟಕದ ಅಧ್ಯಕ್ಷ ರಫೀಕ ಹುದ್ದಾರ, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಬ್ದುಲ್ ವಹಾಬ ಬಾನ್ಸಾರಿ, ಮುಖಂಡರುಗಳಾದ ರಿಯಾಜ ಖಾನ್, ಅಬ್ದುಲ್ ರಝಾಕ ಜುಂಜುವಾಡಕರ, ಜಂಗ್ಲಿ ಸಾಬ ಸನದಿ, ಯಾಸೀನ್ ಜುಂಜುವಾಡಕರ, ಶಬ್ಬೀರ ಕಿತ್ತೂರು, ಅನಿಲ್ ಶಾರವಾನ, ಇನಿಯಾಸ ಬಲಿಗಾರ, ಬಿಜೆಪಿ ನಗರ ಘಟಕದ ಅಧ್ಯಕ್ಷ ಬಸವರಾಜ ಕಲಶೆಟ್ಟಿ, ಕಾರ್ಯದರ್ಶಿ ನರೇಂದ್ರ ಚೌವ್ಹಾಣ್, ಯುವ ಮೋರ್ಚಾ ಅಧ್ಯಕ್ಷ ಮಂಜುನಾಥ ಪಾಟೀಲ, ಮುಕಂಡರುಗಳಾದ ಚಂದ್ರಕಾಂತ ಕ್ಷೀರಸಾಗರ, ಗುರುಮಠಪತಿ, ನೀಲಾವತಿ ಮಾದರ ಮೊದಲಾದವರು ಉಪಸ್ಥಿತರಿದ್ದರು.